ಚಿತ್ರದುರ್ಗ: ಲೋಕಾಯುಕ್ತರ ಬಲೆಗೆ ಬಿದ್ದು ಜೈಲಿನಲ್ಲಿದ್ದ ಜಿಲ್ಲೆಯ ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ಜಿ.ವಿ ತಿಮ್ಮರಾಜು (40) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅಜ್ಜಿ ,ಮೊಮ್ಮಗ ಸಾವು
ನಗರದ ಜೈಲಿನಲ್ಲಿದ್ದಾಗ ಹೃದಯಾಘಾತವಾಗಿದೆ. ಕೂಡಲೇ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಏ.21ರಂದು ಮುಖ್ಯಾಧಿಕಾರಿ ಜಿ.ವಿ. ತಿಮ್ಮರಾಜು ಪುರಸಭೆ ಸದಸ್ಯ ಶಂಕರಪ್ಪ ಅವರಿಂದ 25 ಸಾವಿರ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೋಲಿಸ್ ಬಲೆಗೆ ಬಿದಿದ್ದರು. ಲೋಕಾಯುಕ್ತ ಬಲೆಗೆ ಬಿದ್ದ ಸುದ್ದಿ ಕೇಳಿ ತಿಮ್ಮರಾಜು ಅವರ ಅಜ್ಜಿ ಏ.22ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು.



