ಬೆಂಗಳೂರು: ಒಂದನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯವೆಂಬ ನಿಯಮಕ್ಕೆ ಸಡಿಲಿಕೆ ನೀಡಲಾಗಿದೆ. ಒಂದು ವರ್ಷದ ಮಟ್ಟಿಗೆ ಮಾತ್ರ ನಿಯಮ ಸಡಿಲ ಮಾಡಿದ್ದು, ಪೋಷಕರಿಗೆ ದೊಡ್ಡ ಆತಂಕ ದೂರವಾಗಿದೆ. 1ನೇ ತರಗತಿಗೆ ಮಕ್ಕಳ ದಾಖಲಾತಿಗೆ ವಯೋಮಿತಿ 5 ವರ್ಷ 5 ತಿಂಗಳು ತುಂಬಿದ್ರೆ ಸಾಕು, ಈ ವರ್ಷ ದಾಖಲಾತಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1ನೇ ತರಗತಿಗೆ ಮಕ್ಕಳನ್ನು ಸೇರಿಸುವ ವಯೋಮಿತಿಯನ್ನು ಸಡಿಲಿಕೆ ಮಾಡಲಾಗಿದೆ. ಈ ಮೂಲಕ ಪೋಷಕರು ವಯೋಮಿತಿ ಬಗ್ಗೆ ಹೊಂದಿದ್ದಂತ ಗೊಂದಲಕ್ಕೆ ತೆರೆ ಎಳೆಯಲಾಗಿದೆ ಎಂದರು.
ಅಸಮರ್ಥ 7 ಲಿಂಗಾಯತ ಸಚಿವರು ಕೂಡಲೇ ರಾಜೀನಾಮೆ ನೀಡಲಿ: ಚನ್ನಗಿರಿ ಕಾಂಗ್ರೆಸ್ ಶಾಸಕ ಕಿಡಿ
ದೇಶಾದ್ಯಂತ 1ನೇ ತರಗತಿಗೆ ಮಕ್ಕಳ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮವಿದೆ. ಆದರೆ, ಈ ವರ್ಷ ಮಾತ್ರ ಕರ್ನಾಟಕದಲ್ಲಿ ವಯಸ್ಸಿನ ಮಿತಿಯನ್ನು ಸಡಿಲಿಕೆ ಮಾಡಲಾಗುತ್ತಿದೆ. ಈ ವರ್ಷ ಮಾತ್ರ 5 ವರ್ಷ 5 ತಿಂಗಳು ತುಂಬಿದ ಮಕ್ಕಳನ್ನು 1ನೇ ತರಗತಿಗೆ ದಾಖಲಾತಿ ಮಾಡಬಹುದು ಎಂಬುದಾಗಿ ತಿಳಿಸಿದರು.
ಎಸ್‌ಇಪಿ ವರದಿ ಆಧಾರದ ಮೇಲಿನ ಕಡ್ಡಾಯ 6 ವರ್ಷ ವಯೋಮಿತಿಯನ್ನು ಸಡಿಲಿಸಲಾಗಿದೆ. ಆದರೆ, ಒಂದನೇ ತರಗತಿ ಸೇರ್ಪಡೆಗೆ ಯುಕೆಜಿ ಆಗಿರಬೇಕು. ಆದರೆ ಇದು ಈ ವರ್ಷಕ್ಕೆ ಮಾತ್ರ ಅನ್ವಯವಾಗಲಿದೆ. ಮುಂದಿನ ವರ್ಷದಿಂದ ಕಡ್ಡಾಯ ವಯೋಮಿತಿ 6 ವರ್ಷವೇ ಇರಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಮುಂದಿನ ವರ್ಷದಿಂದ 1ನೇ ತರಗತಿಗೆ ದಾಖಲಾತಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ದೇಶದಲ್ಲಿ ಇರುವಂತೆಯೇ 1ನೇ ತರಗತಿಗೆ ಶಾಲಾ ಮಕ್ಕಳ ದಾಖಲಾತಿಗೆ 6 ವರ್ಷ ಕಡ್ಡಾಯವೆಂಬ ನಿಯಮ ಜಾರಿಯಲ್ಲಿ ಇರಲಿದೆ ಎಂದರು.
ಕರ್ನಾಟಕದಲ್ಲಿ 1ನೇ ತರಗತಿಗೆ ಮಕ್ಕಳ ದಾಖಲಾತಿಯ ವಯಸ್ಸಿನ ಮಿತಿಯ ಸಂಬಂಧ ಎನ್ ಇ ಪಿ ಅವರಿಂದ ವರದಿ ಕೇಳಲಾಗಿತ್ತು. ಎನ್ ಇ ಪಿ ಸೂಚನೆ ಮೇರೆಗೆ ಈ ವರ್ಷ ಮಾತ್ರ 1ನೇ ತರಗತಿ ದಾಖಲಾತಿಗೆ 5 ವರ್ಷ 5 ತಿಂಗಳ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ ಎಂಬುದಾಗಿ ತಿಳಿಸಿದರು.