ಡಿವಿಜಿಸುದ್ದಿ.ಕಾಂ ದಾವಣಗೆರೆ: ಉತ್ತರ ಕರ್ನಾಟಕ ಭಾಗದ ನೆರೆ ಸಂತ್ರಸ್ತರಿಗೆ ಶ್ರೀಶೈಲ ಪೀಠದಿಂದ 634 ಗ್ರಾಂ ಚಿನ್ನ ದೇಣಿಗೆ ನೀಡಲು ಮುಂದಾಗಿದ್ದು, ಈ ಚಿನ್ನ ಮಾರಿ 100 ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಿದೆ. ರಾಜ್ಯ ಸರ್ಕಾರದ ಪರಿಹಾರ ನಿಧಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆಗೆ ಸ್ಪಂದಿಸಿ, ಮನೆ ನಿರ್ಮಾಣಕ್ಕೆ ಶ್ರೀಶೈಲ ಮಠವು ಮುಂದಾಗಿದೆ.
ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ 33ನೇ ಹಾಗೂ ಶ್ರೀ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ 8ನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಪರಿಹಾರ ನಿಧಿ ಘೋಷಿಸಿದರು.

ಪ್ರತಿ ವರ್ಷ ಮೂರು ದಿನಗಳ ಕಾಲ ಶ್ರೀಗಳ ಪುಣ್ಯಾರಾಧನೆ ಇರುತ್ತಿತ್ತು. ಆದರೆ, ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಇರುವುದರಿಂದ ಪುಣ್ಯಾರಾಧನೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿ ಭಕ್ತಾಧಿಗಳದ ನಿಧಿ ಸಂಗ್ರಹಕ್ಕೆ ಮುಂದಾಗಿತ್ತು. ಶ್ರೀಗಳ ಕರೆಗೆ ಸ್ಪಂದಿಸಿದ ಭಕ್ತರು,ಹಣ ಜೊತೆ ಚಿನ್ನವನ್ನು ದಾನವಾಗಿ ನೀಡಿದ್ದರು.
ಭಕ್ತರ ದಾನದ ಜೊತೆಗೆ ಮಠ ಚಿನ್ನವೂ ಸೇರಿ 634 ಗ್ರಾಂ ಚಿನ್ನದೇಣಿಗೆ ನೀಡಿಲು ನಿರ್ಧರಿಸಲಾಗಿದೆ. ಇದೇ ಚಿನ್ನವನ್ನು ಮಾರಿ ನೆರೆ ಸಂಸ್ರಸ್ತರಿಗೆ 100 ಮನೆ ನಿರ್ಮಿಸಲು ಶ್ರೀಮಠ ಮುಂದಾಗಿದೆ.
ಶ್ರೀ ಶೈಲ ಪೀಠದ ಜಗದ್ಗುರುಗಳ ಲಿಂಗೋದ್ಭವ ಮೂರ್ತಿ ಸುವರ್ಣ ಕವಚಕ್ಕೆ ಇಟ್ಟಿದ್ದ ಚಿನ್ನವನ್ನು ನೂರು ಮನೆಗಳ ನಿರ್ಮಾಣಕ್ಕೆ ಚಿನ್ನ ಮಾರಿದ ಹಣ ಉಪಯೋಗ ಮಾಡಲಾಗುವುದು. ಈ ಬಗ್ಗೆ ಸಿಎಂ ಯಡಿಯೂರಪ್ಪ ಜೊತೆ ಚರ್ಚಿಸಿ ಯೋಜನೆ ಕಾರ್ಯರೂಪಕ್ಕೆ ತರುತ್ತೇವೆಂದು ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಉಪಸ್ಥಿತರಿದ್ದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 9844460336, 7483892205



