ದಾವಣಗೆರೆ: 2025-25ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ (PUC result) ಪ್ರಕಟವಾಗಿದೆ. ಜಿಲ್ಲೆಯಲ್ಲಿ ಶೇ 69.45ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.ಕಳೆದ ವರ್ಷಕ್ಕಿಂತ ಶೇ. 11ರಷ್ಟು ಫಲಿತಾಂಶ ಕುಸಿತವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಕಳಪೆ ಸಾಧನೆ ಮಾಡಿದೆ.
ರಾಜ್ಯದ ಜಿಲ್ಲಾವಾರು ಫಲಿತಾಂಶ ನೋಡುವುದಾದ್ರೆ ಕಳೆದ ವರ್ಷ (2023-24) ಶೇ 80.96 ಫಲಿತಾಂಶದೊಂದಿಗೆ ಜಿಲ್ಲೆ 21ನೇ ಸ್ಥಾನದಲ್ಲಿತ್ತು. ಈ ವರ್ಷ ಒಂದು ಸ್ಥಾನ ಮೇಲೆ ಬಂದಿದ್ದು 20ನೇ ಸ್ಥಾನದಲ್ಲಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 21,153 ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದರು ಜಿಲ್ಲೆಯಲ್ಲಿ ಶೇ 69.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಜಿಲ್ಲೆಯಲ್ಲಿ ಸರ್.ಎಂ.ವಿ ಪದವಿ ಪೂರ್ವ ಕಾಲೇಜಿನ ಅದಿತಿ ವಿ.ಅಂಗಡಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 597 ಅಂಕ ಗಳಿಸಿ ರಾಜ್ಯದಲ್ಲಿ 3ನೇ ರ್ಯಾಂಕ್ ಪಡೆದಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇದೇ ಕಾಲೇಜಿನ ಎನ್.ಎಂ. ಜಯಲಕ್ಷ್ಮಿ, ರಾಹುಲ್ ಮಠದ್ ಹಾಗೂ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ಎನ್.ರವಿಕಿರಣ್, ದಿ ಟೀಮ್ ಪದವಿ ಪೂರ್ವ ಕಾಲೇಜಿನ ಸೃಜನಾ ಎಸ್.ಗೌಡ 595 ಅಂಕಗಳನ್ನು ಪಡೆದಿದ್ದಾರೆ.