ದಾವಣಗೆರೆ: ಬೈಕ್ನಲ್ಲಿ ಅಕ್ರಮವಾಗಿ ಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಜಿಲ್ಲೆಯ ಚನ್ನಗಿರಿ ಪಟ್ಟಣದ ಗಣಪತಿ ವೃತ್ತದ ಬಳಿ ಸಾಗುತ್ತಿದ್ದಾಗ ಅರಣ್ಯ ಇಲಾಖೆ ಪೊಲೀಸರು ಗಂಧದ ತುಂಡು ಸಹಿತಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ.
ದಾವಣಗೆರೆ ಸೇರಿ ಐದು ಮಹಾನಗರ ಪಾಲಿಕೆಗಳಿಗೆ ಶೀಘ್ರದಲ್ಲಿ ಚುನಾವಣೆ; ಆಯುಕ್ತ ಸಂಗ್ರೇಶಿ
ಚನ್ನಗಿರಿ ಪಟ್ಟಣದ ಮನ್ಸೂರ್ (36), ಮಹಮದ್ ಶರೀಫ್ (50) ಹಾಗೂ ಬಿಲ್ಲಹಳ್ಳಿ ಗ್ರಾಮದ ಸನಾವುಲ್ಲಾ (38) ಬಂಧಿತ ಆರೋಪಿಗಳು. 4 ಕೆ.ಜಿ 960 ಗ್ರಾಂ ಗಂಧದ ತುಂಡುಗಳು ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.