Connect with us

Dvgsuddi Kannada | online news portal | Kannada news online

ದಾವಣಗೆರೆ: ಯಮಹಾ Rx ಬೈಕ್ ಕಳ್ಳತನ ಆರೋಪಿ ಬಂಧನ; 4.80 ಲಕ್ಷ ಮೌಲ್ಯದ ಆರು ಬೈಕ್ ವಶ

davangere police 31

ದಾವಣಗೆರೆ

ದಾವಣಗೆರೆ: ಯಮಹಾ Rx ಬೈಕ್ ಕಳ್ಳತನ ಆರೋಪಿ ಬಂಧನ; 4.80 ಲಕ್ಷ ಮೌಲ್ಯದ ಆರು ಬೈಕ್ ವಶ

ದಾವಣಗೆರೆ: ದಾವಣಗೆರೆ ನಗರದಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಮಹಾ Rx ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯಿಂದ 4.80 ಲಕ್ಷ ಮೌಲ್ಯದ ಆರು ಯಮಹಾ Rx ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜ್ಯ ಬಜೆಟ್; ದಾವಣಗೆರೆ ಜಿಲ್ಲೆಗೆ ಸಿಕ್ಕಿದ್ದೇನು? ಬಜೆಟ್ ಬಗ್ಗೆ ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್ ಏನು ಹೇಳಿದ್ರು..?

ಜಾಫರ್ ಸಾಧಿಕ್ ಎಂಬುವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ Yamaha RX 135 ಬೈಕನ್ನು ಯಾರೋ ಕಳ್ಳತನ ಮಾಡಿಕೊಂಡು ಹೊಗಿದ್ದಾರೆ ಎಂದು ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಮಾಲು ಮತ್ತು ಆರೋಪಿ ಪತ್ತೆ ಮಾಡಲು ಎಎಸ್ಪಿ ವಿಜಯ ಕುಮಾರ, ಎಂ ಸಂತೋಷ ಮತ್ತು ಮಂಜುನಾಥ, ಜಿ ಹಾಗೂ ಡಿವೈಎಸ್ಪಿ ಶರಣ ಬಸವೇಶ್ವರ ಬೀಮರಾವ್. ಬಿ ಮಾರ್ಗದರ್ಶನದಲ್ಲಿ ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಅಶ್ವಿನ್ ಕುಮಾರ್ ಆರ್ ಜಿ ನೇತೃತ್ವದಲ್ಲಿ ಉಪ ನಿರೀಕ್ಷಕ ಇಮ್ತಿಯಾಜ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡವು ಮಾ. 07ರಂದು ಬಂಬೂಬಜಾರ್ ರಸ್ತೆಯಲ್ಲಿ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಕಿಶೋರ್ ಕುಮಾರ್,ಡಿ.ಕೆ (22) ವಾಸ :ವಿದ್ಯಾನಗರ ದಾವಣಗೆರೆ ಟೌನ್ ಈತನನ್ನು ಬಂಧನ ಮಾಡಲಾಗಿದೆ.

ದಾವಣಗೆರೆ: ಮಾ.07 ಅಡಿಕೆ ಧಾರಣೆ; ಸ್ವಲ್ಪ ಏರಿಕೆ ಕಂಡ ದರ- ಕನಿಷ್ಠ, ಗರಿಷ್ಠ ರೇಟ್ ಎಷ್ಟಿದೆ..?

ಆರೋಪಿ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದು ವಿಚಾರಣೆ ವೇಲೆ ತಿಳಿದು ಬಂದಿದೆ. ಆರೋಪಿ ಮೇಲೆ ನಗರದ ಬಡವಾಣೆ ಪೊಲೀಸ್ ಠಾಣೆ-02, ಕೆಟಿಜೆ ನಗರ ಪೊಲೀಸ್ ಠಾಣೆ-01, ವಿದ್ಯಾನಗರ ಪೊಲೀಸ್ ಠಾಣೆ -02, ಆಜಾದ್ ನಗರ ಪೊಲೀಸ್ ಠಾಣೆ-01 ಪ್ರಕರಣಗಳಲ್ಲಿ ಒಟ್ಟು 06 ಆರ್ ಎಕ್ಷ್ 100 ಬೈಕ ಗಳನ್ನು ವಶಪಡಿಸಿಕೊಂಡಿದ್ದು ಸದರಿ ಬೈಕ್ ಗಳ ಅಂದಾಜು ಮೌಲ್ಯ 4.80 ಲಕ್ಷ ರೂ. ಆಗಿರುತ್ತದೆ. ಪತ್ತೆ ಕಾರ್ಯದಲ್ಲಿ ಯಶ್ವಸಿಯಾದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಫಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top