ದಾವಣಗೆರೆ: ಕಳಪೆ, ಹಾಫ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ವಿರುದ್ಧ ದಾವಣಗೆತೆ ಜಿಲ್ಲಾ ಪೊಲೀಸರ ಜಾಗೃತಿ ಮುಂದುವರೆದಿದ್ದು, ಮೂರು ದಿನದಲ್ಲಿ ನಗರದ ವಿವಿಧ ಕಡೆ ಸುಮಾರು 5 ಸಾವಿರಕ್ಕೂ ಹೆಚ್ಚು ಗುಣಮಟ್ಟವಲ್ಲದ ಹೆಲ್ಮೆಟ್ ವಶಪಡಿಸಿಕೊಂಡಿದ್ದಾರೆ. ಸೋಮವಾರ ಹಾಫ್ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುತ್ತಿದ್ದವರ ಹೆಲ್ಮೆಟ್ ವಶಪಡಿದೊಕೊಂಡ ದಾವಣಗೆರೆ ದಕ್ಷಿಣ ಮತ್ತು ಉತ್ತರ ಸಂಚಾರಿ ಠಾಣೆ ಪೊಲೀಸರು, ಪೂರ್ಣ ಪ್ರಮಾಣದ ಐಎಸ್‌ಐ ಮಾರ್ಕ್ ಹೊಂದಿದ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಿದರು.
ದಾವಣಗೆರೆ: ಫೆ.24ರ ಅಡಿಕೆ ಧಾರಣೆ; ದಿಢೀರ್ ಏರಿಕೆ ಬಳಿಕ ಕುಸಿತ..!!!
ಈ ಬಗ್ಗೆ ಎಎಸ್ಪಿ ವಿಜಯ್ ಕುಮಾರ್ ಎಂ ಸಂತೋಷ್ ಮಾತನಾಡಿ, ಬೇಸಿಗೆ ಕಾಲವೆಂದು ಪೂರ್ಣ ಹೆಲೈಟ್ ಧರಿಸುವುದನ್ನು ವಾಹನ ಸವಾರರು ನಿರ್ಲಕ್ಷಿಸಬಾರದು. ಬೇಸಿಗೆಗಾಲ, ಚಳಿಗಾಲ, ಮಳೆಗಾಲ ಎಂಬುದು ಇಂಡಿಯನ್
ಮೋಟರ್ ವೆಹಿಕಲ್ ಕಾಯ್ದೆಯಲ್ಲಿ ಬರುವುದಿಲ್ಲ. ಹೀಗಾಗಿ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಐಎಸ್‌ಐ ಮಾರ್ಕ್ ಹೆಲ್ಮೆಟ್ ಧರಿಸಬೇಕು ಎಂದರು.
ದಾವಣಗೆರೆ: ಈ ಏರಿಯಾದಲ್ಲಿ ಸಂಜೆ ವರೆಗೆ ವಿದ್ಯುತ್ ವ್ಯತ್ಯಯ
ದಾವಣಗೆರೆಯಲ್ಲಿ ಪ್ಲಾಸ್ಟಿಕ್ ಮತ್ತು ಅರ್ಧ ಹೆಲೆಟ್ ವಿರುದ್ಧ ಅಭಿಯಾನ ಪ್ರಾರಂಭಿಸಿದ್ದೇವೆ. ಮೂರು ದಿನದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಹೆಲೆಟ್‌ಗಳನ್ನು ವಶಪಡಿಸಿಕೊಂಡಿದ್ದೇವೆ.
ಅರ್ಧ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ವಾಹನ ಸವಾರರು ಐಎಸ್‌ಐ ಮಾರ್ಕ್ ಹೆಲ್ಮೆಟ್ ಧರಿಸುವ ಮೂಲಕ ಅಪಘಾತ ಸಂದರ್ಭದಲ್ಲಿ ತಮ್ಮ ಪ್ರಾಣ ರಕ್ಷಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಶರಣ ಬಸವೇಶ್ವರ, ಸಂಚಾರಿ ಸಿಪಿಐಮಂಜುನಾಥ್ ನಲವಾಗಲು, ಉತ್ತರ ಸಂಚಾರಿ ಠಾಣೆಯ ಪಿಎಸ್‌ಐ ಜಯಶೀಲಾ, ದಕ್ಷಿಣ ಸಂಚಾರಿ ಠಾಣೆಯ ಪಿಎಸ್‌ಐ ಶೈಲಜಾ, ಉತ್ತರ ಸಂಚಾರಿ ಠಾಣೆಯ ಪಿಎಸ್‌ಐ ಮಂಜಪ್ಪ, ಸಂಚಾರಿ ಪೊಲೀಸರಾದ ರವಿಕುಮಾರ್, ಸುಭಾಷ್, ಕೃಷ್ಣಪ್ಪ,
ಹೊನ್ನೂರ್ ಸಾಬ್ ಇದ್ದರು.



