ದಾವಣಗೆರೆ: ಬೆಳಗ್ಗೆ ಜಮೀನಿಗೆ ತೆರಳುತ್ತಿದ್ದಾಗ ರೈತನ ಮೇಲೆ ಹೆಜ್ಜೇನು ದಾಳಿ (Honey bee attack) ನಡೆಸಿದ್ದು, ಹೆಜ್ಜೇನು ಕಡಿತದಿಂದ ಆರೋಗ್ಯದಲ್ಲಿ ತೀವ್ರವಾಗಿ ಏರುಪೇರು ಆಗಿದ್ದ ರೈತನನ್ನು ಕೂಡಲೇ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ರೈತ ಮೃತಪಟ್ಟಿರುವ ಘಟನೆ ಇಂದು (ಫೆ.20) ನಡೆದಿದೆ.
ದಾವಣಗೆರೆ: ಮತ್ತೆ ಅಡಿಕೆಗೆ ಭರ್ಜರಿ ಬೆಲೆ; 54 ಸಾವಿರ ಗಡಿ ಸನಿಹ…!!
ಹುಚ್ಚವ್ವನಹಳ್ಳಿಯ ನಾಗಪ್ಪ (65) ಮೃತಪಟ್ಟ ರೈತನಾಗಿದ್ದು, ಬೆಳಿಗ್ಗೆ ಜಮೀನಿಗೆ ಹೋಗುವಾಗ ಹೆಜ್ಜೇನು ದಾಳಿ ನಡೆಸಿದ್ದವು. ರೈತನನ್ನು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಶಾಸಕ ಕೆ.ಎಸ್.ಬಸವಂತಪ್ಪ ಆಸ್ಪತ್ರೆಗೆ ಭೇಟಿ ನೀಡಿ ರೈತನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮೇ.10ರವರೆಗೆ ಇ-ಖಾತಾ ಅಭಿಯಾನ
ತೋಟದಲ್ಲಿ ಎಳೆನೀರು ಕೀಳುವಾಗ ದೋಟಿಗೆ ವಿದ್ಯುತ್ ಸ್ಪರ್ಶಿಸಿ ದಾವಣಗೆರೆ ಮೂಲದ ಕಾರ್ಮಿಕ ಸಾವು



