ದಾವಣಗೆರೆ: ಮನೆಯ ಮೋಟಾರ್‌ನ ವಿದ್ಯುತ್ ಶಾಕ್ ನಿಂದ (Electric shock) ಮಹಿಳೆ ಮೃತಪಟ್ಟ ಘಟನೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಆರುಂಡಿ ಗ್ರಾಮದಲ್ಲಿ ನಡೆದಿದೆ.
ಮನೆ ನೀರು ಸರಬರಾಜಿಗೆ ಅಳವಡಿಸಿದ್ದ ಮೋಟಾರ್‌ನಿಂದ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಆರುಂಡಿ ಗ್ರಾಮದ ಗೃಹಿಣಿ ಗಂಗಮ್ಮ (40) ಮೃತಪಟ್ಟಿದ್ದಾರೆ.ಮೋಟಾರ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗಲಿದೆ.