ದಾವಣಗೆರೆ: ಪ್ರಸಕ್ತ ಸಾಲಿನ ಬೇಸಿಗೆ ಹಂಗಾಮಿಗೆ ಭದ್ರಾ ಕಾಲುವೆಯಲ್ಲಿ ( bhadra Canal) ನೀರು ಹರಿಸಲಾಗುತ್ತಿದ್ದು, ಕಾಲುವೆಗೆ ಅಳವಡಿಸಿರುವ ಅನಧಿಕೃತ ಪಂಪ್‍ಸೆಟ್‍ಗಳನ್ನು (Unauthorized pumpset) ಫೆಬ್ರವರಿ 7 ರಿಂದ ತೆರವುಗೊಳಿಸುವ ಕಾರ್ಯಚರಣೆಯನ್ನು ಪ್ರಾರಂಭಿಸಲಾಗುವುದು. ರೈತರು ಅನಧಿಕೃತ ಪಂಪ್‍ಸೆಟ್ ತೆರವುಗೊಳಿಸದಿದ್ರೆ ಕಾನೂನು ಕ್ರಮ (Legalization) ಕೈಗೊಳ್ಳಲಾಗುವುದು ನೀರಾವರಿ ಇಲಾಖೆ (Irrigation department) ಎಚ್ಚರಿಕೆ ನೀಡಿದೆ.
ಈ ವಿಭಾಗ ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ಶಾಖಾ ಕಾಲುವೆ ಹಾಗೂ ಹರಿಹರ ಶಾಲಾ ಕಾಲುವೆಯಲ್ಲಿನ ಮಲೇಬೆನ್ನೂರು ವಿಭಾಗ ವ್ಯಾಪ್ತಿಯಲ್ಲಿನ ಮಲೆಬೆನ್ನೂರು ಶಾಖಾ ಕಾಲುವೆಯಲ್ಲಿ ಅನಧಿಕೃತವಾಗಿ ಕಾಲುವೆ ನೀರನ್ನು ಎತ್ತಿಕೊಳ್ಳಲು ಅಳವಡಿಸಲಾಗಿರುವ ಪಂಪ್‍ಸೆಟ್‍ಗಳನ್ನು ತಕ್ಷಣ ತೆರವುಗೊಳಿಸಬೇಕು, ತಪ್ಪಿದಲ್ಲಿ ಕರ್ನಾಟಕ ನೀರಾವರಿ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭದ್ಯಾ ನಾಲಾ ವಿಭಾಗದ ಇಂಜಿನಿಯರ್ ತಿಳಿಸಿದ್ದಾರೆ.
ದಾವಣಗೆರೆ: ಅಪ್ಪು ಪ್ರಾಥಮಿಕ, ಬಿಸಲೇರಿ ಬಸಮ್ಮ ಭೀಮಪ್ಪ ಪ್ರೌಢಶಾಲಾ ಮಾನ್ಯತೆ ರದ್ದು



