ದಾವಣಗೆರೆ: ನಗರದ ಡಿ.ಸಿ.ಎಂ ಲೇ ಔಟ್ ಬಸ್ ಸ್ಟಾಪ್ ಎದುರು, ಇಲ್ಲಿ ಡಿ.ವಿ.ಎಸ್ ಪದವಿ ಪೂರ್ವ ಕಾಲೇಜು ಮತ್ತು ಸಮರ್ಥ ಮೆಡಿಕಲ್ ಅಕಾಡೆಮಿ ಎಂಬ ಅನಧಿಕೃತವಾದ ನಾಮಫಲಕವನ್ನು ಹಾಕಿಕೊಂಡು ಇಲಾಖೆ ಅನುಮತಿ ಇಲ್ಲದೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬಂದಿರುತ್ತದೆ.
ಈ ಹೆಸರಿನಲ್ಲಿ ಯಾವುದೇ ಪದವಿ ಪೂರ್ವ ಕಾಲೇಜು, ಅಥವಾ ಟ್ಯುಟೋರಿಯಲ್ ಸಂಸ್ಥೆ ಇಲಾಖೆಯಿಂದ ನೋಂದಣಿ ಆಗಿರುವುದಿಲ್ಲ. ಆದ್ದರಿಂದ ಈ ಸಂಸ್ಥೆಗೆ ಯಾವುದೇ ವಿದ್ಯಾರ್ಥಿಗಳನ್ನು ದಾಖಲು ಮಾಡಬಾರದೆಂದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ಉಪ ನಿರ್ದೇಶಕ ಕರಿಬಸಪ್ಪ ತಿಳಿಸಿದ್ದಾರೆ.



