ದಾವಣಗೆರೆ: ಗ್ರಾಮೀಣ ಭಾಗದ ಮನೆಕಳ್ಳತನ ಮಾಡುತ್ತಿದ್ದ ಅದೇ ಗ್ರಾಮದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಯಿಂದ ಕೃತ್ಯಕ್ಕೆ ಬಳಸಿದ ವಾಹನ ಸಹಿತ 2.21 ಲಕ್ಷ ಮೌಲ್ಯದ ಚಿನ್ನ, ನಗದು ವಶಕ್ಕೆ ಪಡೆಯಲಾಗಿದೆ.
ಹರಿಹರ ತಾಲೂಕು ಹಳ್ಳಿಹಾಳ್ ಮಟ್ಟಿಕ್ಯಾಂಪ್ ಗ್ರಾಮದ ವಾಸಿ ಕವಿತಾ ಎಂಬುವವರು ಡಿ.18ರಂದು ಮನೆ ಬೀಗ ಹಾಕಿಕೊಂಡು ಹೊರ ಹೋಗಿದ್ದರು. ಆಗ ಮನೆಯ ಹಿಂಭಾಗಿಲು ತೆರೆದು ಮನೆಯ ಒಳಗೆ ಪ್ರವೇಶ ಮಾಡಿದ ಯಾರೋ ಕಳ್ಳರು, ಮನೆಯ ಗಾಡ್ರೇಜ್ ಬೀರುವಿನಲ್ಲಿದ್ದ ಒಟ್ಟು 80 ಗ್ರಾಂ ತೂಕ 04 ಲಕ್ಷ ರೂ ಬೆಲೆ ಬಾಳುವ ಬಂಗಾರದ ಆಭರಣಗಳು ಮತ್ತು 40,000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರ ಎಂದು ಮಲೇಬೆನ್ನೂರು ದೂರು ದಾಖಲಿಸಿದ್ದರು.
ಈ ಪ್ರಕರಣದ ಆರೋಪಿ ಹಾಗೂ ಸ್ವತ್ತನ್ನು ಪತ್ತೆ ಮಾಡಲು ಎಎಸ್ಪಿಗಳಾದ ವಿಜಯಕುಮಾರ್ ಎಂ ಸಂತೋಷ, ಜಿ. ಮಂಜುನಾಥ ಡಿವೈಎಸ್ಪಿ ಬಿ.ಎಸ್ ಬಸವರಾಜ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ನೇತೃತ್ವದಲ್ಲಿ ಮಲೇಬೆನ್ನೂರು ಠಾಣೆಯ ಪಿಎಸ್ ಐ ಪ್ರಭು ಡಿ. ಕೆಳಗಿನಮನಿ (ಕಾ-ಸು),ಚಿದಾನಂದಪ್ಪ ಪಿ.ಎಸ್.ಐ (ತನಿಖೆ) ಹಾಗೂ ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡ ಆರೋಪಿ ಅದೇ ಹಳ್ಳಿಹಾಳ್ ಮಟ್ಟಿಕ್ಯಾಂಪ್ ಗ್ರಾಮದ ಮಂಜುನಾಥ ಎನ್ ಬಂಧನ ಮಾಡಿ ವಿಚಾರಣೆ ನಡೆಸಿದಾಗ ಮೇಲ್ಕಂಡ ಪ್ರಕರಣದಲ್ಲಿ ಕೃತ್ಯ ಎಸಗಿರುವುದು ಧೃಡಪಟ್ಟಿದ್ದು, ಆರೋಪಿಯಿಂದ ಸುಮಾರು ರೂ 1,98,000/- ಮೌಲ್ಯದ ಒಟ್ಟು 38 ಗ್ರಾಂ ತೂಕದ ಬಂಗಾರದ ಆಭರಣಗಳು, ಮತ್ತು 23500/- ರೂ ನಗದು ಹಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ 2,50,000/- ರೂ ಬೆಲೆಬಾಳುವ ಕೆ.ಎ17ಎಎ3515 ನೇ ಟಾಟಾ ಕಂಪನಿಯ ಮಿನಿ ಗೂಡ್ಸ್ ವಾಹನವನ್ನು ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಂಡದ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.