ದಾವಣಗೆರೆ; ನಗರದ ಹೊರ ವಲಯದ ಆವರಗೆರೆಯ ಗುಂಡಿ ಮಹದೇವಪ್ಪ ಸಮಾಧಿ ಇರುವ ತೋಟದ ಬಾವಿಗೆ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ಮತ್ತು ತುರ್ತು ಸೇವಾ ಠಾಣೆಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಗುಂಡಿ ಪುಷ್ಪಾಸಿದ್ದೇಶ್ ಅವರ ಹಸು ತೋಟದಲ್ಲಿ ಮೇಯುತ್ತಿತ್ತು. ಬಾವಿಯ ಪಕ್ಕದಲ್ಲಿ ಬಂದು ಆಯತಪ್ಪಿ ನೀರಿಗೆ ಬಿದ್ದಿತ್ತು. ಹಸು ಮೇಲಕ್ಕೆ ಬರಲು ಸಾಧ್ಯವಾಗದೇ ಪರದಾಡುತ್ತಿತ್ತು. ಈ ಬಗ್ಗೆ ಅಲ್ಲೇ ಕೆಲಸಗಾರರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ತೆರಳಿದ ಸಹಾಯಕ ಅಗ್ನಿಶಾಮಕ ಅಧಿಕಾರಿ ಭೀಮರಾವ್ ಉಪ್ಪಾರ ನೇತೃತ್ವದ ಅಗ್ನಿಶಾಮಕ ಸಿಬ್ಬಂದಿ ನೀರಿಗೆ ಇಳಿದು ಹಗ್ಗ ಕಟ್ಟಿ ಹಸುವನ್ನು ಮೇಲೆ ಮೇಲೆತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಟಿ.ಸಿ.ನಾಗರಾಜ್, ಎಚ್.ಅಶೋಕ ನಾಯ್ಕ, ಜಿ.ಪ್ರಜ್ವಲ್, ಮಹಾಂತೇಶ್ ಮಲ್ಕಣ್ಣ
ಪಾಲ್ಗೊಂಡಿದ್ದರು.



