ದಾವಣಗೆರೆ: ಗ್ರಾಮೀಣ ಭಾಗದ ಪ್ರತಿ ಮನೆಗೆ ಇ-ಸ್ವತ್ತು ತಲುಪಿಸುವ ಹೊಣೆ ಗ್ರಾಮ ಪಂಚಾಯಿತಿ ಪಿಡಿಒಗಳದ್ದು, ಜನವರಿ ಅಂತ್ಯದೊಳಗೆ ಜಿಲ್ಲೆಯ ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೆ ಇ-ಸ್ವತ್ತು ತಲುಪಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು.
ಪಂಚಾಯಿತಿ ಸಭಾಂಗಣದಲ್ಲಿ 42 ಗ್ರಾಮ ಪಿಡಿಒ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಆಸ್ತಿ, ನಿವೇಶನ, ಮನೆಗಳಿಗೆ ಸಂಬಂಧಿಸಿದ ಆಸ್ತಿಗಳ ಜಗಳ ಹೆಚ್ಚಾಗಿರುತ್ತದೆ. ವ್ಯಾಜ್ಯ ತಡೆಯಲು ಆಸ್ತಿಗಳ ಡಿಜಿಟಲೀಕರಣ ಮಾಡಿಸಬೇಕಿದೆ. ಹೀಗಾಗಿ ಇ-ಸ್ವತ್ತು ಅಗತ್ಯವಾಗಿದ್ದು, ಜನವರಿ ಅಂತ್ಯದೊಳಗೆ ಗ್ರಾಮೀಣ ಭಾಗದ ಪ್ರತಿ ಮನೆಗೆ ಇ-ಸ್ವತ್ತು ಆದ್ಯತೆಯ ಮೇರೆಗೆ ವಿತರಿಸಬೇಕು ಎಂದು ತಿಳಿಸಿದರು.
- ಪ್ರಮುಖ ಅಂಶ
- ಪ್ರತಿ ಮನೆಗೆ ಇ-ಸ್ವತ್ತು ವಿತರಿಸುವ ಹೊಣೆ ಪಿಡಿಒಗೆ
- ಆಸ್ತಿಯ ನಕಲಿ ಖಾತೆ ತಡೆಯಲು ಇ-ಸ್ವತ್ತು ಅವಶ್ಯಕ
- ಇಸ್ವತ್ತು ವಿತರಿಸಲು 300 ರೂ. ಶುಲ್ಕ ಹಾಗೂ 30 ದಿನಗಳ ಕಾಲಾವಧಿ
- ಪೌತಿಖಾತೆ ಬದಲಾವಣೆಗೆ ಆಂದೋಲನ
ಪೌತಿಖಾತೆ ಬದಲಾವಣೆಗೆ ಆಂದೋಲನ : ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ಇ-ಸ್ವತ್ತು ವಿತರಣೆಗೆ 300 ರೂ. ಶುಲ್ಕ ಹಾಗೂ 30 ದಿನಗಳ ಕಾಲಾವಧಿ ಇದೆ. ಅಧಿಕಾರಿಗಳು ಸರ್ವರ್ ಸಮಸ್ಯೆಯ ಇದೆ ಎಂದು ನೆಪ ಹೇಳದೆ, ಜನರಿಗೆ ಸ್ಪಂದಿಸಬೇಕು. ಇ-ಸ್ವತ್ತು ವಿತರಣೆಗೆ ತೊಡಕಾಗಿರುವ ಪೌತಿಖಾತೆ ಬದಲಾವಣೆಗೆ ಆಂದೋಲನ ನಡೆಸಬೇಕೆಂದುದು ಪಿಡಿಒಗಳಿಗೆ ಸೂಚಿಸಿದರು.



