ಡಿವಿಜಿ ಸುದ್ದಿ, ದಾವಣಗೆರೆ: ಯಾವೊಬ್ಬ ವಿದ್ಯಾರ್ಥಿಯೂ ಹುಟ್ಟತ್ತಲೆ ದಡ್ಡನಲ್ಲ. ಯಾರು ಪೂರ್ವಗ್ರಹ ಪೀಡಿತರಾಗದೆ ಕಲಿಕೆಯಲ್ಲಿ ತೊಡಗಬೇಕು ಎಂದು ಖ್ಯಾತ ಸಂಪನ್ಮೂಲ ವ್ಯಕ್ತಿ ಅತುಲ್ ಬೆಂಗೇರಿಯವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ದಾವಣಗೆರೆ ಜಿಲ್ಲಾಡಳಿತ, ಡಿಡಿಪಿಐ , ಡೈಯಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ‘ಪರೀಕ್ಷೆ ಒಂದು ಹಬ್ಬ ಹಾಗೂ ವ್ಯಕ್ತಿತ್ವ ವಿಕಸನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ಕಲಿಕೆಯಲ್ಲಿ ವೈಯಕ್ತಿಕ ಭಿನ್ನತೆಗಳನ್ನು ಹೊಂದಿರುತ್ತಾರೆ. ಅವುಗಳನ್ನು ಅರಿತು ಕಲಿಕೆಗೆ ದಾರಿ ಮಾಡಿಕೊಡಬೇಕಾದ್ದು ಅವಶ್ಯಕವಾಗಿದೆ. ಮಕ್ಕಳಿಗೆ ಆತ್ಮವಿಶ್ವಾಸವೆಂಬ ಟಾನಿಕ್ ನೀಡಿ ಆರೋಗ್ಯ ಕಲಿಕೆಗೆ ನಾಂದಿ ಹಾಕಿರೆಂದರು. ಪರೀಕ್ಷೆಯಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ಪರಿಹಾರಗಳ ಬಗ್ಗೆ ವಿವರಿಸಿದರು.
ಸಂಪನ್ಮೂಲ ವ್ಯಕ್ತಿ ರಾಜೀವ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆಯ ಒತ್ತಡ ನಿವಾರಣೆಗೆ ಬೇಕಾದ ಟಿಪ್ಸ್ ತಿಳಿಸಿದರು. ಕಾರ್ಯಕ್ರಮದಲ್ಲಿ ದಾವಣಗೆರೆ ಡಿಡಿಪಿಐ ಪರಮೇಶ್ವರಪ್ಪ, ರಾಜ್ಯ ಮುಖ್ಯ ಶಿಕ್ಷಕ ಸಂಘದ ಗೌರವ ಅಧ್ಯಕ್ಷ ಎಸ್ ಕೃಷ್ಣಮೂರ್ತಿ ಶ್ರೇಷ್ಠಿ, ಪ್ರಾಂಶುಪಾಲೆ ಪ್ರಭಾವತಿ, ಶಾಲೆಯ ಆಡಳಿತಾಧಿಕಾರಿ ಹರೀಶ್ ಬಾಬು.ಎನ್.ಆರ್ ಹಾಜರಿದ್ದರು. ಸಿ.ಆರ್.ಪಿ ಮುರುಗೇಂದ್ರಯ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.