ದಾವಣಗೆರೆ: ಮೊಬೈಲ್ ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಸುಲಿಗೆ ಮಾಡಿದ್ದ ರೂ 36,000 ಬೆಲೆಯ 3 ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ರೂ 60,000 ಬೆಲೆಯ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
ಪರಮೇಶ ನಾಯ್ಕ್ ಎಂಬುವವರು ಎಸ್.ಎಸ್ ಹೈಟೆಕ್ ಸರ್ವೀಸ್ ರಸ್ತೆಯಲ್ಲಿರುವ ಕೂಲ್ ಗಾರ್ಡನ್ ರೆಸ್ಟೋರೆಂಟ್ ಬಳಿ ಬೀಡಾ ಅಂಗಡಿಯನ್ನು ಬಂದ್ ಮಾಡಿಕೊಂಡು ಮನೆಗೆ ಹೋಗುತ್ತಿರುವಾಗ ಯಾರೋ ಅಡ್ಡಗಟ್ಟಿ ನಿಲ್ಲಿಸಿ ರೂ 4500/- ನಗದು ಹಣ ಮತ್ತು ರಿಯಲ್ ಮಿ ಹೆಸರಿನ ಮೊಬೈಲ್‌ನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಕೇಸ್ ನ ಆರೋಪಿಗಳ ಪತ್ತೆ ಮಾಡಲು ಎಎಸ್ಪಿಗಳಾದ ವಿಜಯಕುಮಾರ ಎಂ ಸಂತೋಷ, ಮಂಜುನಾಥ ಹಾಗೂ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ರವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಪ್ರಭಾವತಿ.ಸಿ.ಶೇತಸನದಿ ಪಿಎಸ್ ಐ ವಿಜಯ್.ಎಂ, ಶ್ರೀ ವಿಶ್ವನಾಥ ಜಿ.ಎನ್ ಹಾಗೂ ಸಿಬ್ಬಂದಿಗಳಾದ ಶಂಕರ್ ಜಾದವ್, ಆನಂದ.ಎ, ಮಲ್ಲಿಕಾರ್ಜುನ, ಲಕ್ಷ್ಮಣ.ಆರ್ ಶ್ರೀ ಭೋಜಪ್ಪ.ಕೆ ಮತ್ತು ಗೋಪಿನಾಥ.ಬಿ.ನಾಯ್ಕ್ ಒಳಗೊಂಡ ತಂಡ ರಚಿಸಲಾಗಿತ್ತು. ಆರೋಪಿಗಳಾದ 1) ಪ್ರವೀಣ್.ವಿ.ಗೌಡ @ ಪ್ರವೀಣ್ (22) ವಾಸ ಮಹಾರಾಜಪೇಟೆ, ದಾವಣಗೆರೆ 2) ವಿಷ್ಞೇಶ್.ಎಸ್, (19) ವಾಸ ಭಾರತ್ ಕಾಲೋನಿ, ದಾವಣಗೆರೆ ಮತ್ತು 3) ಆಕಾಶ್.ಪಿ (19) ವಾಸ – ಭಾರತ್ ಕಾಲೋನಿ, ಕಬ್ಬೂರು ಬಸಪ್ಪ ನಗರ, ದಾವಣಗೆರೆ. ಇವರನ್ನು ಬಂಧಿಸಿ, ಸುಲಿಗೆ ಮಾಡಿದ 1) ರಿಯಲ್ ಮಿ ಕಂಪನಿಯ ಮೊಬೈಲ್ ಅಂದಾಜು ಬೆಲೆ ರೂ 6000/- 3) ರಿಯಲ್ ಮಿ ಕಂಪನಿಯ ಮೊಬೈಲ್ ಅಂದಾಜು ಬೆಲೆ ರೂ 15000/- & 4)ಓಪೋ ಕಂಪನಿಯ ಮೊಬೈಲ್ ಅಂದಾಜು ಬೆಲೆ ರೂ 15,000/- ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಅಂದಾಜು ಬೆಲೆ ರೂ 60,000/-ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸದರಿ ಆರೋಪಿಗಳ ಪತ್ತೆಯಿಂದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ 2 ಪ್ರಕರಣ ಹಾಗು ವಿದ್ಯಾನಗರ ಠಾಣೆಯ 1 ಪ್ರಕರಣ ಪತ್ತೆಯಾಗಿರುತ್ತೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



