ದಾವಣಗೆರೆ: ರವೀಂದ್ರನಾಥ್ ಗೆ ಬುದ್ಧಿ ಕಡಿಮೆಯಾಗಿದೆ. ಅವರಿಗೆ ವಯಸ್ಸಾಗಿದೆ. ಬುದ್ಧಿ ಸ್ಥಿಮಿತ ಇಲ್ಲ. ಇನ್ಮುಂದೆ ಜ್ಞಾನ ಇಟ್ಟುಕೊಂಡು ಮಾತಾಡಲಿ ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಭಿನ್ನಮತೀಯರೊಂದಿಗೆ ನಾನೇನೂ ಮಾತನಾಡಲ್ಲ. ಕಾಲವೇ ಎಲ್ಲದಕ್ಕೂ
ಉತ್ತರ ನೀಡಲಿದೆ. ಲೋಕಸಭೆ ಚುನಾವಣೆ ಸೋಲಿನ ನಂತರ ನಾನು ಎಲ್ಲಿಯೂ, ಯಾವಾಗಲೂ ಅಳಲಿಲ್ಲ. ಎಸ್.ಎ.ರವೀಂದ್ರನಾಥ್ ಗೆ ಏನಾಗಿದೆ. ಬುದ್ಧಿ ಕಡಿಮೆಯಾಗಿ ಹಾಗೆ ಮಾತನಾಡುತ್ತಾರೆ.ನನಗೆ ಬುದ್ಧಿ ಸ್ಥಿಮಿತವಿದೆ, ಅವರಿಗೆ ಬುದ್ಧಿ ಸ್ಥಿಮಿತ ಇಲ್ಲ ಅನಿಸುತ್ತೆ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರವರ
ತಪ್ಪು, ಕರ್ಮದಿಂದ ಸೋತು ನನ್ನನ್ನು ದೂರಿದರು. ಕಾಲ ಬಂದಾಗ ಎಲ್ಲರಿಗೂ, ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಈಗ ಸಮಯವಿಲ್ಲ. ಮುಂದೆ ಯಾರನ್ನೂ ಸುಮ್ಮನೆ ಬಿಡಲ್ಲ. ವಿರೋಧ ಪಕ್ಷದವರಿಗೂ ಉತ್ತರಕೊಡುತ್ತೇನೆ. ನಮ್ಮ ಪಕ್ಷದವರಿಗೂ ಕೊಡುತ್ತೇನೆ ಎಂದರು.
ಅವರೆಲ್ಲರೂ ಹೀನಾಯವಾಗಿ ಸೋತಿದ್ದಾರೆ. ನಾವೇನೂ ಹೀನಾಯವಾಗಿ ಸೋತಿಲ್ಲ. ನಾನೇ ಚುನಾವಣೆಗೆ ನಿಂತು ಎಲ್ಲಾ ಕಡೆ ಓಡಾಡಿದ್ದರೆ ಗೆಲ್ಲುತ್ತಿದ್ದೆವು. ನನಗೆ ಆರೋಗ್ಯ ಸರಿ ಇಲ್ಲದ
ಕಾರಣ ಎಲ್ಲೂ ಪ್ರಚಾರಕ್ಕೆ ಹೋಗಲಾಗಲಿಲ್ಲ. ಹಾಗಂತ ನಾವೇನೂ ಅಳುತ್ತಾ ಕುಳಿತಿಲ್ಲ. ಭಾರೀ ಅಂತರದಿಂದ ಸೋಲುತ್ತಾರೆಂದು ಭಾವಿಸಿದ್ದವರು, ನಾವು ಕಡಿಮೆ ಅಂತರದಿಂದ ಸೋತಿದ್ದಕ್ಕೆ ಅಳುತ್ತಿರಬೇಕು ಎಂದು ತಿರುಗೇಟು ನೀಡಿದರು.
ಯಡಿಯೂರಪ್ಪ, ವಿಜಯೇಂದ್ರ ಬಂಡವಾಳ ಬಯಲಿಗೆಳೆಯುವುದಾಗಿ ಮಾತನಾಡಿದ್ದು ಅದೇ ಪುಣ್ಯಾತ್ಮ ರೇಣುಕಾಚಾರ್ಯ, ಪಕ್ಷದ ವಿರುದ್ಧ ಮಾತನಾಡಿದ್ದವರೂ ಅವರೇ. ಕಾಂಗ್ರೆಸ್ಸಿನ ಜಿಲ್ಲಾ ಮಂತ್ರಿಬಳಿ ಮೂನಾಲ್ಕು ಸಲ ಹೋಗಿದ್ದವರೂ ಅವರೇ. ಈಗ ಅವರೇ ಹಾದಿ ಬೀದಿಯಲ್ಲಿ ಮಾತನಾಡುತ್ತಿರುವುದು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಯಾರು
ಏನೇನು ಮಾಡಿದ್ದಾರೆ ಎಂಬುದು ಎಲ್ಲರಿಗೂ
ಗೊತ್ತಿದೆ. ಅವರವರ ಆತ್ಮಸಾಕ್ಷಿಯನ್ನೇ ಕೇಳಿಕೊಳ್ಳಲಿ. ಚುನಾವಣೆಯಲ್ಲಿ ಸೋಲಿಗೆ ಯಾರುಎಂಬುದರ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ ದೂರು ಕೊಟ್ಟು ಬಂದಿದ್ದೇನೆ. ಅವರು
ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.