ದಾವಣಗೆರೆ: ರಸ್ತೆಯಲ್ಲಿಯೇ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕೊರಳಿನಲ್ಲಿದ್ದ 2.4 ಲಕ್ಷ ಮೌಲ್ಯದ ಮಾಂಗಲ್ಯ, ಚೈನ ಕಿತ್ತುಕೊಂಡು ಪರಾರಿಯಾದ ಘಟನೆ ನಗರದ ಜೆ ಹೆಚ್ ಪಟೇಲ್ ಬಡಾವಣೆಯಲ್ಲಿ ನಡೆದಿದೆ.
ಜೆಹೆಚ್ ಪಟೇಲ್ ಬಡಾವಣೆಯ ನಿವಾಸಿ ಆಶಾ ಎಂಬುವವರು ಮಧ್ಯಾಹ್ನ ಮಗಳನ್ನು ಶಾಲೆಯಿಂದ ಕರೆದುಕೊಂಡು ಬರಲು ತೆರಳಿದ್ದಾಗ ಈ ಘಟನೆ ನಡೆದಿದೆ. ಬಡಾವಣೆಯ ‘ಬಿ’ ಬ್ಲಾಕ್ 2ನೇ ಮೇನ್, 1ನೇ ಕ್ರಾಸ್‌ನಲ್ಲಿ ಇಬ್ಬರು ಯುವಕರು ಬ್ಯಾಗ್ ಹಾಕಿಕೊಂಡು ನಿಂತಿದ್ದರು. ಬೈಕಿನಲ್ಲಿ ಹಿಂಬದಿಯಿಂದ ಬಂದು ಕೊರಳಿನಲ್ಲಿದ್ದ 1 ಲಕ್ಷ ಬೆಲೆಯ15 ಗ್ರಾಂನ ಶಾರ್ಟ್ ಚೈನ್, 1.4 ಲಕ್ಷ ರೂ ಬೆಲೆಯ 20 ಗ್ರಾಂ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.