ದಾವಣಗೆರೆ: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ನೀಡಲಾಗುವ 2024-25ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದಿಂದ 12 ಹಾಗೂ ಪ್ರೌಢಶಾಲಾ ವಿಭಾಗದಿಂದ 6 ಸೇರಿ ಒಟ್ಟು 18 ಶಿಕ್ಷಕರು ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೊಟ್ರೇಶ್ ತಿಳಿಸಿದ್ದಾರೆ.
ಚನ್ನಗಿರಿ ತಾಲೂಕಿನಿಂದ ಚನ್ನಗಿರಿ ಪಟ್ಟಣದ ಫಾರೂಕಿ ನಗರ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಆಸಿಯಾ ಪರ್ವಿನ್ (ಕಿರಿಯ ಪ್ರಾಥಮಿಕ), ಕೆರೆಬಿಳಚಿಯ ಬಾಲಕರ ಸರ್ಕಾರಿ ಉರ್ದು ಶಾಲೆಯ ನಸೀಮಾ ಬಾನು (ಹಿರಿಯ ಪ್ರಾಥಮಿಕ), ಆರೋನಹಳ್ಳಿ ಸರ್ಕಾರಿ ಉನ್ನತೀಕರಿಸಿದ ಶಾಲೆ (ಪ್ರೌಢಶಾಲಾ ವಿಭಾಗ). ಹರಿಹರ ತಾಲೂಕಿನಿಂದ ಧೂಳೆಹೊಳೆಯ ಯಶೋದಾ ಬಾರ್ಕಿ (ಕಿರಿಯ ಪ್ರಾಥಮಿಕ), ಭಾನುವಳ್ಳಿಯ ಚಿತ್ರಕಲಾ ಶಿಕ್ಷಕ ಆರ್. ಶಿವಕುಮಾರ್ (ಹಿರಿಯ ಪ್ರಾಥಮಿಕ), ಕಡರನಾಯಕನಹಳ್ಳಿಯ ಡಿ.ಎಸ್. ವೆಂಕಟೇಶ ರಾವ್ (ಪ್ರೌಢಶಾಲಾ ವಿಭಾಗ).
ದಾವಣಗೆರೆ ಉತ್ತರ ವಲಯದ ಕದರಪ್ಪನಹಳ್ಳಿಯ ಬಿ.ಎಸ್. ಉಷಾ (ಕಿರಿಯ ಪ್ರಾಥಮಿಕ), ಕೆ.ಆರ್. ಮಾರ್ಕೆಟ್ ಶಾಲೆಯ ರೇಷ್ಮಾ ಬಾನು (ಹಿರಿಯ ಪ್ರಾಥಮಿಕ), ಆಜಾದ್ ನಗರ ಎಸ್‌ಎಸ್‌ಪಿ ಉರ್ದು ಶಾಲೆಯ ರೆಹಾನಾ ಬಾನು (ಪ್ರೌಢಶಾಲೆ). ದಾವಣಗೆರೆ ದಕ್ಷಿಣ ವಲಯದ ವೆಂಕಟೇಶ್ವರ ನಗರ ಶಾಲೆಯ ಎಚ್.ಆರ್. ಪ್ರಕಾಶ್ (ಕಿರಿಯ ಪ್ರಾಥಮಿಕ), ಗೋಪನಾಳು ಗ್ರಾಮದ ಪಿ.ಆರ್. ಮಲ್ಲಿಕಾರ್ಜುನಯ್ಯ (ಹಿರಿಯ ಪ್ರಾಥಮಿಕ), ಮಾಯಕೊಂಡದ ಬಿ.ಎಚ್. ಲೀಲಾವತಿ (ಪೌಢಶಾಲೆ). ಜಗಳೂರು ತಾಲೂಕಿನ ಉದ್ದಬೋರನಹಳ್ಳಿಯ ಜಿ.ಎಸ್. ಸಂಗಮೇಶ್ (ಕಿರಿಯ ಪ್ರಾಥಮಿಕ), ಬಿಳಿಚೋಡು ಗ್ರಾಮದ ಪಿ.ನಾಗೇಂದ್ರಪ್ಪ (ಹಿರಿಯ ಪ್ರಾಥಮಿಕ), ಗುರುಸಿದ್ದಾಪುರದ ವಿಶ್ವನಾಥ್ ಜಂಬಗಿ (ಪ್ರೌಢಶಾಲೆ). ಹೊನ್ನಾಳಿ ತಾಲೂಕಿನ ಹೊಳೆ ಮಾದಾಪುರದ ಜಿ.ಸಿ. ಶಿವಪ್ರಸಾದ್ ಕುಮಾರ್ (ಕಿರಿಯ ಪ್ರಾಥಮಿಕ), ಬೀರಗೊಂಡನಹಳ್ಳಿಯ ಕೆ.ಆರ್. ಶೋಭಾ (ಹಿರಿಯ ಪ್ರಾಥಮಿಕ), ನ್ಯಾಮತಿಯ ಕೃಷ್ಣಾನಾಯ್ಕ (ಪ್ರೌಢಶಾಲೆ).