ದಾವಣಗೆರೆ: ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 80 ಸಾವಿರ ಮೌಲ್ಯದ 2 ಬೈಕ್ ವಶಪಡಿಸಿಕೊಂಡಿದ್ದಾರೆ.
ನಗರದ ನಿಟುವಳ್ಳಿ ಮೌನೇಶ್ವರ ಬಡಾವಣೆ ನಿವಾಸಿ, ಆರನೇಕಲ್ಲು ಮೂಲದ ಎಸ್. ಶಂಕರಪ್ಪ(35) ಬಂಧಿತ ಆರೋಪಿ. ಕಳೆದ
ಸೆ.1ರಂದು ಸಂಜೆ ಹದಡಿ ರಸ್ತೆಯ ಎಸ್ಕೆಪ್ ಬಾರ್ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿವೈಎಸ್ಪಿ ಮಲ್ಲೇಶ್ದೊಡ್ಡಮನಿ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕಿ ಪ್ರಭಾವತಿ ಸಿ.ಸೇತಸನದಿ,ಪಿಎಸೈ ಜಿ.ಎನ್.ವಿಶ್ವನಾಥ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವು ಆರೋಪಿಯನ್ನು ಪತ್ತೆ ಹಚ್ಚಿದೆ. ಆರೋಪಿಯ ಬಂಧನದಿಂದ ವಿದ್ಯಾನಗರ ಬಡಾವಣೆಯ 2 ಪ್ರಕರಣಗಳು ಪತ್ತೆಯಾಗಿವೆ. ಈ ಆರೋಪಿಯು ಈ ಹಿಂದೆ ರೈಲ್ವೇ ಪೊಲೀಸ್ ಠಾಣೆಯ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿದ್ದನು. ಪತ್ತೆ ಕಾರ್ಯ ಕೈಗೊಂಡ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.