ನವದೆಹಲಿ: ದೇಶದಾದ್ಯಂತ ಮತ್ತೆ ವಾಣಿಜ್ಯ ಬಳಕೆಯ ಪ್ರತಿ ಸಿಲಿಂಡರ್ ಬೆಲೆ 39 ರೂ. ಏರಿಕೆಯಾಗಿದೆ. ಇದರಿಂದ ವಾಣಿಜ್ಯ ಬಳಕೆಯ ಹೋಟೆಲ್, ರಸ್ಟೋರೆಂಟ್ ಮಾಲೀಕರಿಗೆ ಸಂಕಷ್ಟ ಎದುರಾಗಿದೆ. ಇದರಿಂದ ಜನರಿಗೆ ಪರೋಕ್ಷವಾಗಿ ಆರ್ಥಿಕ ಹೊರೆ ಹೇರುವ ಸಾಧ್ಯತೆ ಇದೆ. ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರ ದೆಹಲಿಯಲ್ಲಿ 39 ರೂಪಾಯಿ ಹೆಚ್ಚಾಗಿದೆ. ಮೇ ತಿಂಗಳಲ್ಲಿ 19 ರೂಪಾಯಿ, ಜೂನ್ ನಲ್ಲಿ 69.50 ರೂ. ಹಾಗೂ ಜುಲೈನಲ್ಲಿ ಪ್ರತಿ ಸಿಲಿಂಡರ್ ಮೇಲೆ 30 ರೂಪಾಯಿಯಷ್ಟು ಹಣ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ 39 ರೂ. ಏರಿದೆ. ಇದರಿಂದ ವಾಣಿಜ್ಯ ಬಳಕೆಯ ಗ್ರಾಹಕರು ನಿರಂತರಾಗಿ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ವಿವಿಧ ನಗರಗಳಲ್ಲಿ ಎಷ್ಟಿದೆ..?:ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಇಂದಿನಿಂದ ಸೆಪ್ಟಂಬರ್ 1ರಿಂದ ಜಾರಿಗೆ ಬರಲಿದೆ.ದೆಹಲಿಯಲ್ಲಿ ಇಂದು ವಾಣಿಜ್ಯ ಬಳಕೆಯ ಸಿಲಿಂಡರ್ ದರ 1691.50 ರೂ., ಮುಂಬೈ ಮಹಾನಗರದಲ್ಲಿ 1605 ರೂ. ಇದ್ದದ್ದು ಇದೀಗ 1,644 ರೂಪಾಯಿ ಆಗಿದೆ. ಕೋಲ್ಕತ್ತದಲ್ಲಿ 1764.50 ರೂಪಾಯಿಯಿಂದ 1,802.50 ರೂ.ಗೆ ಹೆಚ್ಚಳವಾಗಿದೆ. ಚೆನ್ನೈ 1817 ರೂ. ನಿಂದ 1,855 ರೂ. ಬೆಂಗಳೂರಿನಲ್ಲಿ1769.50 ರೂ.ಗೆ ಏರಿಕೆಯಾಗಿದೆ.