ದಾವಣಗೆರೆ: ಇನ್ ಸ್ಟಾಗ್ರಾಮ್ ನಲ್ಲಿ ಬಂದ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ, ದಾವಣಗೆರೆ ವ್ಯಕ್ತಿಯೊಬ್ಬ ಬರೋಬ್ಬರಿ 11.32 ಲಕ್ಷ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.
ದಾವಣಗೆರೆ ವ್ಯಕ್ತಿಯೊಬ್ಬರು ಇನ್ ಸ್ಟಾಗ್ರಾಮ್ ನೋಡುತ್ತಿರುವ ವೇಳೆ ಒಂದು ವಿಡಿಯೋ ಬಂದಿದ್ದು, ಅದರಲ್ಲಿನ ಜಾಹೀರಾತು ಮೇಲೆ ಕ್ಲಿಕ್ ಮಾಡಿದ್ದಾರೆ.ಈ ವೇಳೆ ಸೈಬರ್ ವಂಚಕರು ಮಲ್ಟಿಪ್ಲಸ್ ಕ್ಲಬನ್ ವಿಐಪಿ-66 ಗ್ರೂಪಿಗೆ ಸೇರ್ಪಡೆ ಮಾಡಿ ಷೇರು ವ್ಯವಹಾರದಲ್ಲಿ ಹಣ ತೊಡಗಿಸಿದರೆ ಕೋಟಿ ಕೋಟಿ ಸಂಪಾದಿಸಬಹುದು ಎಂದು ಮಾಹಿತಿ ಕೊಟ್ಟು ಎಂಟಿಪಿಎಸ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋ ಮೂಲಕ ಇನ್ಸ್ಟಾಲ್ ಮಾಡಿಕೊಳ್ಳುವಂತೆಸೂಚಿಸಿದ್ದಾರೆ.
ಇನ್ ಸ್ಟಾಲ್ ಮಾಡಿದ ನಂತರ ಗ್ರೂಪಿಗೆ ಸೇರಿಸಿಕೊಂಡು ನಂತರ ಪಿರ್ಯಾದಿದಾರರಿಂದ ಹಂತ ಹಂತವಾಗಿ ಒಟ್ಟು 11,32,000/- ರೂ. ಹಣವನ್ನು ತೊಡಗಿಸಿಕೊಂಡು 1,000/- ರೂ
ಲಾಭಾಂಶದ ಹಣವನ್ನು ಖಾತೆಗೆ ಜಮಾ ಮಾಡಿದ್ದಾರೆ. ಅಲ್ಲದೇ 11,31,000/- ರೂ ಹೂಡಿಕೆ ಮಾಡಿದ ಹಣಕ್ಕೆ ಲಾಭವಾಗಿ ಖಾತೆಯಲ್ಲಿ 55.78 ಲಕ್ಷ ರೂ ತೋರಿಸಿದ್ದಾರೆ. ಆ ಹಣವನ್ನು
ಈ ವಿತ್ ಡ್ರಾ ಮಾಡಲು ಹೋದಾಗ ಶೇಕಡಾ 20% ರಷ್ಟು ಪ್ರಾಫಿಟ್ ಟ್ಯಾಕ್ಸ್ ಅನ್ನು ಜಮಾ ಮಾಡುವಂತೆಹೇಳಿದ್ದಾರೆ.
ಇದರಿಂದ ಅನುಮಾನಗೊಂಡು ಸೈಬರ್ ವಂಚಕರು ಆನ್ ಲೈನ್ ಮೂಲಕ ತನಗೆ ಮೋಸ ಮಾಡುತ್ತಿರುವ ಬಗ್ಗೆ ಅನುಮಾನ
ಗೊಂಡು ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂ ಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.