ದಾವಣಗೆರೆ: ಹಗಲು ದರೋಡೆ ಮಾಡುತ್ತಿದ್ದ ಅಂತರ್ ಜಿಲ್ಲಾ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಯಿಂದ 1.69 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ವಶಕ್ಕೆ ಪಡೆಯಲಾಗಿದೆ.
ಹರಿಹರ ನಗರದ ವಿದ್ಯಾನಗರ “ಸಿ” ಬ್ಲಾಕ್ ನಿವಾಸಿ ಗಿರೀಶ.ಎನ್ ದಿನಾಂಕ 04-08-2024 ರಂದು ಬೆಳಗ್ಗೆ 9:45 ಗಂಟೆಗೆ ಮನೆ ಬೀಗ ಹಾಗೂ ಇಂಟರ್ ಲಾಕ್ ಮಾಡಿಕೊಂಡು ಹೋಗಿದ್ದು ಸಂಜೆ 6:00 ಗಂಟೆಗೆ ಬಂದು ನೋಡಿದಾಗ ಮನೆ ಕಳ್ಳತನವಾಗಿರುತ್ತದೆ ಎಂದು ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಡಿವೈಎಸ್ಪಿ ಬಸವರಾಜ್ ಬಿ. ಎಸ್. ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆ ಪೊಲೀಸ್ ನಿರೀಕ್ಷಕ ದೇವಾನಂದ ನೇತೃತ್ವದಲ್ಲಿ ಪಿ.ಎಸ್.ಐ ಶ್ರೀ ಜಿ.ಎಸ್.ವಿಜಯ್, ಶ್ರೀಪತಿ ಗಿನ್ನಿ ಪಿ.ಎಸ್.ಐ, ಅಪರಾಧ ವಿಭಾಗ ಸಿಬ್ಬಂದಿಗಳಾದ ನಾಗರಾಜ ಸುಣಗಾರ, ಸಿದ್ದೇಶ.ಹೆಚ್, ರವಿ.ಆರ್, ರುದ್ರಸ್ವಾಮಿ.ಕೆ.ಸಿ, ಹನುಮಂತಪ್ಪ ಗೋಪನಾಳ, ಹೇಮಾನಾಯ್ಕ್, ಸತೀಶ.ಟಿ.ವಿ, ಚಾಲಕ ರಂಗನಾಥ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಇಸ್ಮಾಯಿಲ್ ಪಿಐ, ಪಿಎಸ್ ಐ ಮಂಜುನಾಥ ಕಲ್ಲೆದೇವರು, ಸಿಬ್ಬಂದಿಗಳಾದ ಅಖ್ತರ್.ಎಸ್.ಎಂ ನಾಗರಾಜ ಕುಂಬಾರ್, ವಿರೇಶ.ವಿ ಹಾಗೂ ರಾಘವೇಂದ್ರ, ಶಾಂತರಾಜ್ ಅವರನ್ನೊಳಗೊಂಡ ತಂಡ ದಿನಾಂಕ: 13-08-2024 ರಂದು ಹರಿಹರ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಖಚಿತ ಮಾಹಿತಿ ಮೇರೆಗೆ ಆರೋಪಿ ಗೌತಂರಾಜ್ @ ಪೋತ್ ರಾಜ್, (34), ವಾಸ: 11ನೇ ಕ್ರಾಸ್ ವಿನೋಭನಗರ, ಶಿವಮೊಗ್ಗ ಸ್ವಂತ ವಿಳಾಸ: ಕುಪ್ಪಿನಕೇರೆ ಗ್ರಾಮ, ಕೂಡ್ಲಿಗಿ ತಾಲೂಕ್, ವಿಜಯನಗರ ಜಿಲ್ಲೆ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತನಿಂದ 1,67,000/-ರೂ ಬೆಲೆಯ 26.83 ಗ್ರಾಂ ಬಂಗಾರ ಹಾಗೂ 2,450/-ರೂ ಬೆಲೆಯ 46.2 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.
ಆರೋಪಿತನ ಹಿನ್ನೆಲೆ:- ಆರೋಪಿ ಗೌತಂರಾಜ್ @ ಪೋತ್ ರಾಜ್ ವಿರುದ್ಧ ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆಯ ವಿನೋಬ ನಗರ ಠಾಣೆ, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ಟೌನ್ ಠಾಣೆ, ಗದಗ್ ಟೌನ್ ಠಾಣೆ, ಕೊಪ್ಪಳ ಜಿಲ್ಲೆಯ ಕೊಪ್ಪಳ ಟೌನ್ & ಮುನಿರಾಬಾದ್ ಠಾಣೆಗಳಲ್ಲಿ, ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಠಾಣೆ, ಮೈಸೂರು ಸಿಟಿಯ ನರಸಿಂಹರಾಜ್ ಠಾಣೆ, ರಾಯಚೂರು ಜಿಲ್ಲೆಯ ನೇತಾಜಿ ನಗರ ಠಾಣೆ ಹಾಗೂ ದಾವಣಗೆರೆ ಜಿಲ್ಲೆಯ ಹರಿಹರ ನಗರ ಪೊಲೀಸ್ ಠಾಣೆಗಳಲ್ಲಿ 10 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿರುತ್ತವೆ.
ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಅಧಿಕಾರಿ ಸಿಬ್ಬಂದಿಯವರನ್ನು ಎಸ್ಪಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಎಸ್ಪಿ ವಿಜಯಕುಮಾರ ಎಂ ಸಂತೋಷ್, ಜಿ ಮಂಜುನಾಥ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.