ದಾವಣಗೆರೆ: ಸರ್ಕಾರದ ಯೋಜನೆಯ ಅರ್ಹ ರೈತರಿಗೆ ನೀಡಬೇಕಾದ ಬೋರ್ ವೆಲ್ ಸರ್ಕಾರಿ ಅಧಿಕಾರಿಗಳು ವಿದ್ಯುತ್ ಪರಿವರ್ತಕ (ಟಿಸಿ) ಅಧಿಕಾರಿಗಳೇ ಮಾರಿಕೊಂಡಿರುವ ಪ್ರಕರಣ ನಡೆದಿದೆ.ಆದಿಜಾಂಬವ ಅಭಿವೃದ್ಧಿ ನಿಗಮದಡಿ ಕೊರೆಸಲಾಗಿದ್ದ ಕೊಳವೆ ಬಾವಿಗೆ ಒಬ್ಬ ರೈತನಿಗೆ ಹಳೆಯ ಟಿಸಿ ನೀಡಿದ್ದು, ಇನ್ನೊಬ್ಬ ರೈತನಿಗೆ ನೀಡಬೇಕಿದ್ದ ಟಿಸಿಯನ್ನೇ ಅಧಿಕಾರಿಗಳು ಮಾರಿಕೊಂಡಿದ್ದಾರೆ
ಈ ಬಗ್ಗೆ ದಾವಣಗೆರೆ ತಾ.ಪಂ. ತ್ತೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಈ ವಿಷಯ ಬಹಿರಂಗಪಡಿಸಿದ್ದಾರೆ.ಆದಿಜಾಂಬವ ಅಭಿವೃದ್ಧಿ ನಿಗಮದ ಮೂಲಕ ಕೊಳವೆಬಾವಿ ಕೊರೆಸಲಾಗಿದ್ದ ಕಂದಗಲ್ಲು ಗ್ರಾಮದ ಗಂಗಾಧರಪ್ಪ ಅವರಿಗೆ ಪಂಪ್‌ಸೆಟ್, ಪೈಪ್ ಕೊಟ್ಟಿದ್ದಾರೆ. ಆದರೆ ಹೊಸ ಟಿಸಿ ಬದಲು ಹಳೆಯದನ್ನು ಕೊಟ್ಟಿದ್ದಾರೆ. ಹುಲಿಕಟ್ಟೆ ಗ್ರಾಮದ ಚನ್ನಬಸಪ್ಪ ಅವರಿಗೆ ಕೊಳವೆಬಾವಿ ಕೊರೆಸಿದ 3 ವರ್ಷದ ಬಳಿಕ ಟಿಸಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಇದಕ್ಕೆ ಯಾರು ಹೊಣೆ ಎಂದರು.
ತಾ.ಪಂ. ಆಡಳಿತಾಧಿಕಾರಿ ಕೃಷ್ಣ ನಾಯ್ಕ ಮತ್ತು ಇಒ ರಾಮ ಭೋವಿ ಈ ಬಗ್ಗೆ ತನಿಖೆ ಮಾಡಿ ವಾರದೊಳಗೆ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಸೌಲಭ್ಯ ದುರ್ಬಳಕೆ ಮಾಡಿಕೊಂಡ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.



