ಡಿವಿಜಿ ಸುದ್ದಿ, ಚನ್ನಗಿರಿ: ಖಾಸಗಿ ಶಾಲೆಯತ್ತ ಮುಖಮಾಡದೇ, ಸರ್ಕಾರಿ ಶಾಲೆ ಉಳಿಸಿ. ಸರ್ಕಾರ ನೀಡುವಂತಹ ಸೌಲಭ್ಯಗಳು ಸದುಪಯೋಗಪಡಿಸಿಕೊಂಡು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳಸಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮಮರುಳಸಿದ್ದಪ್ಪ ಕರೆ ನೀಡಿದರು.
ತಾಲ್ಲೂಕಿನ ಹಿರೇಕೋಗಲೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಬಾಲಕ ಬಾಲಕಿಯರ ಶಾಲೆ ವಾರ್ಷೀಕೋತ್ಸವ ಸಮಾರಂಭ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು. ಇತ್ತೀಚಿನ ದಿನಮಾನಗಳಲ್ಲಿ ಪೋಷಕರು ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಾರೆ. ಆದರೆ ಮಕ್ಕಳನ್ನು ಕೇವಲ ಅಂಕಗಳನ್ನುಗಳಿಸುವ ಯಂತ್ರಗಳನ್ನಾಗಿ ತಯಾರಿಸುತ್ತೀರಿ. ಆದರೆ ನಿಮ್ಮ ಮಕ್ಕಳು ಸಮಾಜದ ಯಾವ ಸಂಸ್ಕಾರಗಳನ್ನು ಕಲಿಯುವುದಿಲ್ಲ.

ಶಿಕ್ಷಣವನ್ನಾ ವ್ಯಾಪರವನ್ನಾಗಿಸಿ ಕೊಂಡಿರುವ ಖಾಸಗಿ ಶಾಲೆಯತ್ತ ಮುಖ ಮಾಡದೆ ಸರ್ಕಾರಿ ಶಾಲೆಯತ್ತ ಮುಖಮಾಡಿ ನಿಮ್ಮ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರವನ್ನು ಕಲಿಯುತ್ತಾರೆ. ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುನಾಥ್ , ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪಿ. ಲಿಂಗರಾಜ್ , ಸರ್ಕಾರಿ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಎಂ.ಬಿ ಪ್ರಭಾಕರ್ , ಕುಬೇರಪ್ಪ ,ಜಿಪಂ ಸದಸ್ಯೆ ಸಾಕಮ್ಮ ಗಂಗಾಧರನಾಯ್ಕ , ತಾಪಂ ಸದಸ್ಯೆ ವೀಣಾಕುಮಾರಿ ಹನುಮಂತಪ್ಪ ,ಗ್ರಾಪಂ ಅಧ್ಯಕ್ಷ ಅನುಭಾಗ್ಯ ಜಗದೀಶ್ , ಜಗದೀಶ್ ಕೆಜಿ, ಸಿ ಆರ್ ಪಿ ತಿಮ್ಮೇಶ್ , ಬಾಲಕ ಬಾಲಕಿಯರ ಶಾಲೆಗಳ ಮುಖ್ಯ ಶಿಕ್ಷಕರು ಶಿಕ್ಷಕಿಯರು ,ಎಸ್ ಡಿಎಂಸಿ ಅಧ್ಯಕ್ಷರು ಸದಸ್ಯರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.



