ನವದೆಹಲಿ: ತಿಂಗಳ ಮೊಲದ ದಿನ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 8.50 ರೂ.ನಷ್ಟು ದರ ಪರಿಷ್ಕರಿಸಿವೆ. ಆದರೆ, ಗೃಹ ಬಳಕೆಯ 14 ಕೆಜಿ ಅಡುಗೆ ಅನಿಲ ಸಿಲಿಂಡರ್ ದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಪ್ರಕಾರ, ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 1652.50 ರೂ. ಆಗಿದೆ, 1646 ರಿಂದ 6.50 ರಷ್ಟು ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ 8.50 ರೂ.ಗಳಷ್ಟು ಏರಿಕೆಯಾಗಿದ್ದು, 1764.50 ರೂ., ಮುಂಬೈನಲ್ಲಿ ಹೊಸ ಬೆಲೆ 1605 ರೂ., ಚೆನ್ನೈನಲ್ಲಿ 1817 ರೂ. ಆಗಿದೆ.
ಸಬ್ಸಿಡಿ ರಹಿತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಬದಲಾಗದೆ ಉಳಿದಿದೆ. ಇದರ ಬೆಲೆ ದೆಹಲಿಯಲ್ಲಿ 803 ರೂ., ಕೋಲ್ಕತ್ತಾದಲ್ಲಿ 829 ರೂ., ಮುಂಬೈನಲ್ಲಿ 802.50 ರೂ. ಮತ್ತು ಚೆನ್ನೈನಲ್ಲಿ 818.50 ರೂ. ದರ ಇದೆ.



