ದಾವಣಗೆರೆ: ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಮಂಜೂರಾಗಿ ಖಾಲಿ ಇರುವ ಕಿರಿಯ ಆರೋಗ್ಯ ಸಹಾಯಕರ 4 ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಕಾರ್ಯಕರ್ತರ ತರಬೇತಿ ಹಾಗೂ ಅರೆ ವೈದ್ಯಕೀಯ ಮಂಡಳಿ ನಡೆಸುವ 3 ವರ್ಷಗಳ ಆರೋಗ್ಯ ನೀರಿಕ್ಷಕರ ಡಿಪ್ಲೋಮಾ ಹೊಂದಿರಬೇಕು. ಪಿ.ಯು.ಸಿ(ವಿಜ್ಞಾನ) ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ 2 ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೋಮಾ ಮತ್ತು ಗಣಕಯಂತ್ರ ತರಬೇತಿ ಹೊಂದಿರಬೇಕು.
ಆಗಸ್ಟ್ 17 ರಂದು ಮಧ್ಯಾಹ್ನ 2 ರೊಳಗಾಗಿ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳ ಕಚೇರಿ, ಶ್ರೀರಾಮನಗರ ರಸ್ತೆ, ದಾವಣಗೆರೆ ಎಸ್.ಎಸ್.ಆಸ್ಪತ್ರೆ ಹಿಂಭಾಗ, ಎನ್.ಸಿ.ಸಿ.ಕ್ಯಾಂಪ್ ಇಲ್ಲಿ ಅರ್ಜಿ ಪಡೆದು ಮೀಸಲಾತಿ ಮತ್ತು ಅನುಭವಕ್ಕೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳ ಪ್ರತಿ ಹಾಗೂ ಭಾವಚಿತ್ರದೊಂದಿಗೆ ಸ್ವಯಂ ಅಭ್ಯರ್ಥಿಯೇ ಹಾಜರಾಗಿ ಅದೇ ದಿನ ಸಂಜೆ 5.00 ಗಂಟೆಯೊಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿ ಡಾ.ಷಣ್ಮುಖಪ್ಪ ತಿಳಿಸಿದ್ದಾರೆ.



