ದಾವಣಗೆರೆ: ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ 7ನೇ ವರ್ಷದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಯ ಹಂದರಗ೦ಬ ಪೂಜಾ ನಗರದ ಹೈಸ್ಕೂಲ್ ಮೈದಾನದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ , ಟ್ರಸ್ಟ್ ಪದಾಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಈ ಬಾರಿ ರಾಜ್ಯದಲ್ಲಿ ಒಳ್ಳೆಯ ಮಳೆಯಾಗಿದೆ. ರೈತರಿಗೆ ಸೂಕ್ತ ವಾತಾವರಣ ವಿದೆ. ಇಂತಹ ಸಂದರ್ಭದಲ್ಲಿ ಬಂದಿರುವ ಗಣೇಶ ಮಹೋತ್ಸವವನ್ನು ಎಲ್ಲರೂ ಪಕ್ಷಾತೀತವಾಗಿ ಸೇರಿ ಯಶಸ್ವಿಗೊಳಿಸೋಣ ಎಂದರು.
ಟ್ರಸ್ಟ್ ಅಧ್ಯಕ್ಷಗುರುಜೊಳ್ಳಿ ಮಾತನಾಡಿ, ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ ನಗರದಲ್ಲಿ 7ನೇ ವರ್ಷ ಸಾರ್ವಜನಿಕ
ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಆಗುತ್ತಿದೆ. ಈ ಹಿನ್ನೆಲೆ ಮಂಟಪನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಈ ಬಾರಿ ವಿಶೇಷವಾಗಿ ಕಾಶಿ ವಿಶ್ವನಾಥ ಕಾರಿಡಾರ್ ಮಾದರಿಯಲ್ಲಿ ಗಣಪತಿ ಮಂಟಪನಿರ್ಮಿಸಲಾಗುವುದು.100X200 ಅಡಿ ಅಳತೆಯ ಪೆಂಡಾಲ್ ನಿರ್ಮಿಸಲಾ ಗುತ್ತಿದೆ. ಕೊಲ್ಕತ್ತಾದಿಂದ ಕಲಾವಿ ದರು ಆಗಮಿಸುತ್ತಿದ್ದು, ಗುರುವಾರದಿಂದ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಉತ್ತರ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರಗಳ ದೇವಸ್ಥಾನಗಳ ಮಾದರಿಯಲ್ಲಿ ಪ್ರತಿವರ್ಷ ಗಣಪತಿ ಮಂಟಪ ನಿರ್ಮಿಸಲಾಗುತ್ತಿದೆ. ದಾವಣಗೆರೆ ಹಾಗೂ ಸುತ್ತಮುತ್ತಲಿನ ಜನರು ಇಲ್ಲಿಯೇ ಪುಣ್ಯ ಕ್ಷೇತ್ರಗಳನ್ನು ಕಣ್ತುಂಬಿಕೊಳ್ಳಬಹುದು ಎಂದರು.
ದೂಡಾಮಾಜಿ ಅಧ್ಯಕ್ಷರಾದರಾಜನಹಳ್ಳಿ ಶಿವಕುಮಾರ್, ದೇವರಮನೆ ಶಿವಕುಮಾರ್, ನಿಯೋಜಿತ ಅಧ್ಯಕ್ಷ ದಿನೇಶ್ ಶೆಟ್ಟಿ,
ಮುಖಂಡರಾದ ಡಾ.ಅಥಣಿ ವೀರಣ್ಯ ಕೆ.ಬಿ.ಶಂಕರನಾರಾಯಣ,
ದಾಸಕರಿಯಪ್ಪ, ಶಿವನಹಳ್ಳಿ ರಮೇಶ್, ರಾಘವೇಂದ್ರ, ಕೆ.ಜಿ.ಶಿವಕುಮಾರ, ಎಸ್.ಮಲ್ಲಿಕಾರ್ಜುನ, ಎ.ನಾಗರಾಜ, ಡಿ.ಕೆ.
ಕುಮಾರ, ಶಿವನಗೌಡ ಪಾಟೀಲ್, ಟಿಂಕ ಶ್ರೀನಿವಾಸ ಮಂಜಣ್ಣ, ಚೇತನಾ ಶಿವಕುಮಾರ, ನವೀನ ಕುಮಾರ ಮತ್ತಿತರರು ಭಾಗವಹಿಸಿದ್ದರು.