ದಾವಣಗೆರೆ: ದೇವಸ್ಥಾನ ಹುಂಡಿ ಕಳ್ಳತನ ಮಾಡಿದ ಮೂರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದಾರೆ. ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಕೊಪ್ಪ ಗ್ರಾಮದ ಶ್ರೀ ದುರುಗಮ್ಮ ದೇವಸ್ಥಾನದ ಹುಂಡಿ ಜು.01 ರಂದು ಕಳ್ಳತನ ನಡೆದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಈ ಕಳ್ಳತನ ಪ್ರಕರಣದ ಆರೋಪಿತರು ಹಾಗೂ ಸ್ವತ್ತಿನ ಪತ್ತೆ ಕಾರ್ಯಾಕ್ಕಾಗಿ ಎಎಸ್ಪಿಗಳಾದ ವಿಜಯಕುಮಾರ್ ಎಂ ಸಂತೋಷ ಮತ್ತು ಜಿ. ಮಂಜುನಾಥ ಹಾಗೂ ಡಿವೈಎಸ್ಪಿ ಬಿ.ಎಸ್ ಬಸವರಾಜ್ ಮಾರ್ಗದರ್ಶನದಲ್ಲಿ ಹಾಗೂ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಪಿಎಸ್ ಐ ನೇತೃತ್ವದಲ್ಲಿ ಆರೋಪಿತರ ಪತ್ತೆಗಾಗಿ ತಂಡವನ್ನು ರಚಿಸಲಾಗಿತ್ತು.
ಮಲೇಬೆನ್ನೂರು ಪೊಲೀಸ್ ಠಾಣೆಯ ಪಿಎಸ್ ಐ ಪ್ರಭು ಡಿ ಕೆಳಗಿನ ಮನಿ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ಮೇಲ್ಕಂಡ ಪ್ರಕರಣದ ಆರೋಪಿಗಳಾದ ಎ-1 ವೇಂಕಟೇಶ @ ವೆಂಕಟ, 38 ವರ್ಷ, ಕೂಲಿ ಕೆಲಸ, ವಾಸ- ಎರೆಬೂದಿಹಾಳು ಗ್ರಾಮ, ಹರಿಹರ ತಾಲ್ಲೂಕ್, ಎ-2 ನಾಗೇಶ್, 28 ವರ್ಷ, ಕೂಲಿ ಕೆಲಸ, ಬುಳ್ಳಾಪುರ ಗ್ರಾಮ. ಹೊನ್ನಾಳಿ ತಾಲ್ಲೂಕ್, ಎ-3 ಹನುಮಂತಪ್ಪ @ ಹನುಮಂತರಾಯ, 30 ವರ್ಷ, ಲೋಕಿಕೆರೆ ಗ್ರಾಮ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಶ್ರೀ ಪ್ರಭು ಡಿ ಕೆಳಗಿನ ಮನಿ, ಮಹದೇವ ಸಿದ್ದಪ್ಪ ಭತ್ತೆ (ತನಿಖೆ) ಪಿ.ಎಸ್.ಐ, ಸಿಬ್ಬಂದಿ ವಿನಾಯಕ, ಲಕ್ಷ್ಮಣ, ಶಿವುಕುಮಾರ, ರಾಜಶೇಖರ್, ಪ್ರಶಾಂತ ಕುಮಾರ, ಮಲ್ಲಿಕಾರ್ಜುನ, ಕಡೇಮನಿ ನಾಗಪ್ಪ, ರಾಜಪ್ಪ, ಮುರುಳಿದರ ರವರ ತಂಡವು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಈ ಪತ್ತೆ ಕಾರ್ಯಕ್ಕೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



