ದಾವಣಗೆರೆ: ಜಿಲ್ಲೆಯಲ್ಲಿ ಇಂದು (ಜು.13) ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ವಿಚ್ಛೇದಿತ 17ಜೋಡಿಗಳು ಒಂದಾಗಿದ್ದಾರೆ. ಲೋಕ್ ಅದಾಲತ್ ನಲ್ಲಿ ರಾಜೀ ಸಂಧಾನ ಮೂಲಕ ಈ ಜೋಡಿಗಳು ಒಂದಾಗಿದ್ದು, ಪರಸ್ಪರ ಹಾರ ಹಾಕಿಸಿ ಸಿಹಿ ತಿನಿಸಿದರು.
ನ್ಯಾಯಾಧೀಶರು, ನ್ಯಾಯವಾದಿಗಳು ಒಂದಾದ ಜೋಡಿಗಳಿಗೆ ಹೂವಿನ ಸಸಿ ನೀಡಿ ಶುಭ ಹಾರೈಸಿದರು. ದಾವಣಗೆರೆ ನ್ಯಾಯಾಲಯದಲ್ಲಿ 15, ಹರಿಹರ ನ್ಯಾಯಾಲಯದಲ್ಲಿ ಎರಡು ವಿಚ್ಛೇದಿತ ಜೋಡಿಗಳನ್ನು ಒಂದು ಮಾಡಲಾಯಿತು.
ಜಿಲ್ಲಾ ಸತ್ರ ನ್ಯಾಯಾಧೀಶೆ ರಾಜೇಶ್ವರಿ ಹೆಗಡೆ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣನವರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ್ ಸೇರಿದಂತೆ ಮತ್ತಿತರರು ಇದ್ದರು.