ದಾವಣಗೆರೆ: ಮಹಾನಗರ ಪಾಲಿಕೆ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 6 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್-10 ಸಿ.ಜಿ.ಹೆಚ್ ಫೀಡರ್ ವ್ಯಾಪ್ತಿಯ ವಿನೋಬನಗರ 2 ನೇ ಮೇನ್, ಹಳೆ ರೆಡ್ಡಿ ಬಿಲ್ಡಿಂಗ್, ಚರ್ಚ್ ರೆಸಿಡೆನ್ಸಿ, ಜಯದೇವ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಫ್-9 ಪಿ.ಜೆ. ಫೀಡರ್ ವ್ಯಾಪ್ತಿಯ ಮೋತಿ ವೀರಪ್ಪ ಕಾಲೇಜ್ ಹಿಂಭಾಗ, ಸರ್ಎಂ.ವಿಶ್ವೇಶ್ವರಯ್ಯ ಪಾರ್ಕ್, ಬ್ಲಡ್ ಬ್ಯಾಂಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಎಫ್-18 ದುರ್ಗಾಂಬಿಕಾ ಫೀಡರ್ ವ್ಯಾಪ್ತಿಯ ಎಂ.ಬಿ ಕೇರಿ, ಹೋಂಡ ಸರ್ಕಲ್, ಕಾಯಿಪೇಟೆ, ಜಾಲಿನಗರ, ಟೀಚರ್ಸ್ ಕಾಲೋನಿ, ಶಿವಾಜಿ ನಗರ, ಶಿವಾಜಿ ಸರ್ಕಲ್, ಚೆಲುವಾದಿ ಕೇರಿ, ಇಡಬ್ಲ್ಯೂಎಸ್, ಹಳೇಪೇಟೆ, ಬಾರ್ಲೈನ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



