ದಾವಣಗೆರೆ: ಸಿರಿಧಾನ್ಯ ನವಣೆ ಬೆಳೆಯಲ್ಲಿ ಅಧಿಕ ಇಳುವರಿ ಕೊಡುವ ಹಾಗೂ ಬರ ನಿರೋಧಕ ತಳಿಯಾದ HN-46 ತಳಿ ಮುಂಗಾರಿಗೆ ಸೂಕ್ತ ಎಂದರು ತರಳಬಾಳು ಕೆವಿಕೆ ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ. ಓ. ಅಭಿಪ್ರಾಯಪಟ್ಟರು.
ಜಗಳೂರು ತಾಲೂಕು ಕಲ್ಲೇದೇವರಪುರ ಗ್ರಾಮದಲ್ಲಿ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ನವಣೆ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆಯ ತರಬೇತಿ ಕಾರ್ಯಕ್ರಮಉದ್ಘಾಟಿಸಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳ ಬೆಳೆಯ ವಿಸ್ತರಣೆ ಕಡಿಮೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಕಡಿಮೆ ಇಳುವರಿ. ನವಣೆ ಪ್ರಮುಖ ಒಂದು ಸಿರಿಧಾನ್ಯ ಬೆಳೆ, ನವಣೆ ಬೆಳೆಯಲ್ಲಿ ಇತ್ತೀಚಿಗೆ ಬಿಡುಗಡೆಯಾದ ನವೀನ ತಳಿಯಾದ ಎಚ್ ಎನ್-46, ಪ್ರತಿ ಎಕರೆಗೆ ನಾಲ್ಕು ಕೆಜಿ ಬೀಜ ಬೇಕಾಗುತ್ತದೆ. ಜೈವಿಕ ಗೊಬ್ಬರಗಳಾದ ಅಜೋಸ್ಪಿರಿಲಂ ಮತ್ತು ರಂಜಕ ಕರಗಿಸುವ ಬ್ಯಾಕ್ಟೀರಿಯ 200 ಗ್ರಾಂ ಪ್ರತಿ ಎಕರೆ ಬೀಜಕ್ಕೆ ಬಿಜೋಪಚಾರ ಮಾಡಿ ಬಿತ್ತನೆ ಮಾಡಬೇಕು ಎಂದರು.
ಕ ಮಣ್ಣು ವಿಜ್ಞಾನಿ ಎಚ್ ಎಮ್ ಸಣ್ಣ ಗೌಡರ ಮಾತನಾಡಿ, ಜೈವಿಕ ಗೊಬ್ಬರದ ಬಳಕೆಯಿಂದ ರಾಸಾಯನಿಕ ಗೊಬ್ಬರದ ಅವಲಂಬನೆಯನ್ನು ಕಡಿಮೆ ಮಾಡಬಹುದು ಎಂದರು. ತರಬೇತಿ ಕಾರ್ಯಕ್ರಮದಲ್ಲಿ ಸಸ್ಯ ಸಂರಕ್ಷಣಾ ತಜ್ಞ ಡಾ. ಅವಿನಾಶ್ ಟಿಜಿ, ಬಿದರಿಕೆರೆ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಕೃಷ್ಣಮೂರ್ತಿ, ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು. ಮುಂಜಾನೆಯ ಪ್ರಾತ್ಯಕ್ಷಿಕೆಯ ಅಂಗವಾಗಿ ಆಯ್ದ 10 ಪ್ರಗತಿಪರ ರೈತರಿಗೆ ನವಣೆ ಬೀಜ ಮತ್ತು ಜೈವಿಕ ಗೊಬ್ಬರಗಳನ್ನು ಕೊಡಲಾಯಿತು.