ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀ ಇಂಡಿಯಾ ಭರ್ಜರಿ ಬ್ಯಾಂಟಿಂಗ್ ಮಾಡಿದ್ದು, ಟೀಂ ಇಂಡಿಯಾದ ಶ್ರೇಯಸ್ ಅಯ್ಯರ್ ಮೊದಲ ಶತಕ, ನಾಯಕ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ಅವರ ಅರ್ಧಶದಿಂದ ನೆರವಿನಿಂದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 347 ರನ್ ಗಳ ಬೃಹತ್ ಮೊತ್ತ ದಾಖಲಿಸಿದೆ.
Innings Break!
Century from @ShreyasIyer15 and fifties from @imVkohli & @klrahul11 power #TeamIndia to a total of 347/4 after 50 overs.
Scorecard – https://t.co/ewSrnE8I9m #NZvIND pic.twitter.com/znZEa1vMHq
— BCCI (@BCCI) February 5, 2020
ಟಾಸ್ ಸೋತ ಟೀಂ ಇಂಡಿಯಾಗೆ ಮೊದಲು ಬ್ಯಾಟಿಂಗ್ ಮಾಡಲು ನ್ಯೂಜಿಲೆಂಡ್ ನಾಯಕ ಟಾಮ್ ಲಾಥಮ್ ಅವಕಾಶ ನೀಡಿದರು. ಈ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡ ಇಂಡಿಯಾ, ಭರ್ಜರಿ ಮೊತ್ತ ಸೇರಿಸಿ ಸವಾಲಿನ ಗುರಿ ನೀಡಿತು. ಟೆಸ್ಟ್ ಕ್ರಿಕೆಟ್ ನಲ್ಲಿ ಓಪನರ್ ಆಗಿ ಮಿಂಚಿದ್ದ ಪೃಥ್ವಿ ಶಾ ಮತ್ತು ಮಯಂಕ್ ಅಗರವಾಲ್ ಭಾರತ ಪರ ಮೊದಲ ಏಕ ದಿನ ಪಂದ್ಯವಾಡಿದರು. ಮೊದಲ ವಿಕೆಟ್ ಗೆ 50 ರನ್ ಕಲೆಹಾಕಿತು, ಪೃಥ್ವಿ ಶಾ 20 ರನ್ ಗಳಿಸಿದರೆ, ಮಯಂಕ್ ಅಗರವಾಲ್ 32 ರನ್ ಕೊಡುಗೆ ನೀಡಿದರು.


ಶಾ,ಅಗರವಾಲ್ ಬಳಿಕ ನಾಯಕ ಕೊಹ್ಲಿ, ಶ್ರೇಯಸ್ ಅಯ್ಯರ್ ಜೊತೆಗೂಡಿ ಮೂರನೇ ವಿಕೆಟ್ 102 ರನ್ ಸೇರಿಸಿದರು. 51 ರನ್ ಗಳಿಸಿದ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 58ನೇ ಅರ್ಧ ಶತಕ ಸಿಡಿಸಿ ಔಟಾದರು. ನಂತರ ಬಂದ ರಾಹುಲ್, ಶ್ರೇಯಸ್ ಜೊತೆ ಸೂಪರ್ ಬ್ಯಾಂಟಿಂಗ್ ನಡೆಸಿ 300 ಗಡಿ ದಾಟಿಸಿದರು. ಈ ಇಬ್ಬರೂ ಐದನೇ ವಿಕೆಟ್‌ಗೆ 146 ರನ್ ಸೇರಿಸಿದರು. ಶ್ರೇಯಸ್ 107 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸೇರಿ 103 ರನ್ ಗಳಿಸಿದರು ಈ ಮೂಲಕ ತಮ್ಮ ಮೊದಲ ಶತಕದ ಬಾರಿಸಿ ಸಂಭ್ರಮಿಸಿದರು. ಕೊನೆಯಲ್ಲಿ ರಾಹುಲ್, ಕೇದಾರ್ ಜಾಧವ್ ಉತ್ತಮ ಬ್ಯಾಟಿಂಗ್ ನಿಂದ ಭಾರತ 347 ರನ್ ಗಳಿಸಿ, ನ್ಯೂಜಿಲೆಂಡ್ ಗೆ ಸವಾಲಿನ ಮೊತ್ತ ನೀಡಿದೆ.



