ಡಿವಿಜಿಸುದ್ದಿ.ಕಾಂ, ಚನ್ನಗಿರಿ: ಏಷ್ಯಾದ ಎರಡನೇ ಅತಿ ದೊಡ್ಡ ಕೆರೆಯಾದ ಶಾಂತಿಸಾರ ಕರೆ ಸರ್ವೇ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು. ಮೂರು ವಾರಗಳ ಕಾಲ ಸರ್ವೇ ಕಾರ್ಯ ನಡೆಯಲಿದೆ.
ಖಡ್ಗ ಸಂಘಟನೆ ಮತ್ತು ಶಾಂತಿ ಸಾಗರ ಹಿತರಕ್ಷಣಾ ಮಂಡಳಿಯ ಸಸತ ಎರಡು ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ನೀರಾವರಿ ಮಂಡಳಿ ಜಂಟಿಯಾಗಿ ಸರ್ವೇ ಕಾರ್ಯ ಕೈಗೆತ್ತಿಕೊಂಡಿದ್ದು, 6,460 ಎಕೆರೆ ವಿಸ್ತೀರ್ಣ ಹೊಂದಿರುವ ಕೆರೆ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಶನಿವಾರ ತಹಶಿಲ್ದಾರ್ ನಾಗರಾಜು ನೇತೃತ್ವದಲ್ಲಿ ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಶಾಂತಿ ಸಾಗರ ಹಿತರಕ್ಷಣಾ ಮಂಡಳಿಯ ಪಾಂಡೋಮಟ್ಟಿಯ ಶ್ರೀ ಗುರುಬಸವ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್, ಖಡ್ಗ ಸಂಘಟನೆಯ ಬಿ.ಆರ್. ರಘು ಚನ್ನಗಿರಿ ಹಿರೇಮಠದ ಶ್ರೀ ಶಾಂತವೀರ ಮಹಾಸ್ವಾಮೀಜಿ ರೈತ ಮುಖಂಡರ ಸಮ್ಮಖದಲ್ಲಿ ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸರ್ವೇ ಕಾರ್ಯಕ್ಕೆ ಚಾಲನೆ ನೀಡಲು ಸಂಸದರು, ಶಾಸಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಯಾರು ಕೂಡ ಬಂದಿರಲಿಲ್ಲ.
ರಾಷ್ಟ್ರೀಯ ಸಂಪತ್ತು ಉಳಿಸಬೇಕು
೬೪೬೦ ಎಕೆರೆ ವಿಸ್ತಿರ್ಣ ಹೊಂದಿರುವ ಸೊಳೆಕೆರೆಯಲ್ಲಿ ಕನಿಷ್ಟ ೧ ಸಾವಿರ ಎಕೆ ಒತ್ತುವರಿಯಾಗಿದೆ. ಕೆರೆ ಸುತ್ತಮುತ್ತ ೧೪ ಹಳ್ಳಿಗಳ್ಳಿದ್ದು, ಕೆರೆ ಒತ್ತುವರಿಯಾಗಿದೆ. 11 ನೇ ಶತಮಾನದಲ್ಲಿ ಕೆರೆ ನಿರ್ಮಾಣವಾಗಿದ್ದು, ಅಲ್ಲಿಂದ ಇಲ್ಲಿವರೆಗೆ ಕೆರೆ ಹೂಳು ಎತ್ತಿಲ್ಲ. ಸರ್ವೇ ಕಾರ್ಯ ನಡೆದಿಲ್ಲ. ರಾಷ್ಟ್ರೀಯ ಸಂಪತ್ತಾಗಿರುವ ಕೆರೆಯನ್ನು ಉಳಿಸಲು ಎಲ್ಲ ರೈತರು ಸಹಕರಿಸಬೇಕಿದೆ. ಕೆರೆಯಲ್ಲಿ ಈಗ 1.6 ಟಿಎಂಸಿ ನೀರು ಮಾತ್ರ ನಿಲ್ಲುತ್ತಿದೆ. ಕೆರೆಯಲ್ಲಿ ತುಂಬಿರುವ ಹೂಳು ಎತ್ತಿದರೆ ಕನಿಷ್ಟ 5 ಟಿಎಂಸಿ ನೀರನ್ನು ನಿಲ್ಲಿಸಲು ಸಾಧ್ಯವಿದೆ ಎಂದು ಎಂದು ಖಡ್ಗ ಸಂಘಟನೆ ರಆಜ್ಯಾಧ್ಯಕ್ಷ ಬಿ.ಆರ್. ರಘು ಹೇಳಿದರು.

ರೈತರನ್ನು ವಿಶ್ವಾಸಕ್ಕೆ ತಗೆದುಕೊಳ್ಳಿ
ಶಾಂತಿಸಾಗರ ಈಗ ಕೇವಲ ಚನ್ನಗಿರಿ ಜನರ ಜೀವ ಜಲವಾಗಿ ಮಾತ್ರ ಉಳಿದಿಲ್ಲ. ಅದು ದಾವಣಗೆರೆ ಮತ್ತು ಚಿತ್ರದುರ್ಗ ಜನರ ಜೀವ ಜಲವಾಗಿದೆ. ಇತಿಹಾಸ ಪ್ರಸಿದ್ಧವಾಗಿರುವ ಕೆರೆಯನ್ನು ಉಳಿಸುವ ಪ್ರಯತ್ನವನ್ನು ಎಲ್ಲರು ಮಾಡಬೇಕಿದೆ. ಈ ಸರ್ವೇ ಕಾರ್ಯದಲ್ಲಿ ರೈತರ ವಿಶ್ವಾಸ ತಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ. ಅಧಿಕಾರಿಗಳು ಈ ದಿಸೆಯಲ್ಲಿ ಕಾರ್ಯನ್ಮುಖವಾಗಬೇಕಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ತೇಜಸ್ವಿ ಪಟೇಲ್ ತಿಳಿಸಿದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 9844460336, 7483892205



