ಡಿವಿಜಿಸುದ್ದಿ.ಕಾಂ, ದಾವಣಗೆರೆ: ಪ್ರತಿಯೊಬ್ಬರೂ ಜೀವನದಲ್ಲಿ ಗುರಿ ಹೊಂದಬೇಕು. ಆ ಗುರಿ ಸಾಧನೆ ಕಡೆ ಹೆಚ್ಚಿನ ಗಮನ ಕೇಂದ್ರಿಕರಿಸಬೇಕು. ಆದರೆ, ಮೊಬೈಲ್ ಆಕರ್ಷಣೆಯಿಂದ ನಿಮ್ಮ ಗುರಿಗೆ ತೊಡಕಾಗಲಿದ್ದು, ಮೊಬೈಲ್ ಬಳಕೆಯಿಂದ ದೂರ ಇರಬೇಕು ಎಂದು ದಾವಣಗೆರೆ ವಿವಿ ಕುಲಪತಿ ವಿ.ಎಸ್. ಹಲಸೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಜೆ.ಎಚ್. ಪಟೇಲ್ ಕಾಲೇಜಿನ ಘಟಿಕೋತ್ಸವ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಧನಾತ್ಮಕ ಮನೋಭಾವನೆಗಳನ್ನು ಹೆಚ್ಚಾಗಿ ಬೆಳೆಸಿಕೊಳ್ಳಬೇಕು. ಬೇರೆಯವರ ಮೇಲೆ ಆರೋಪ ಮಾಡುವುದಕ್ಕಿಂತ ನಾವು ಧನಾತ್ಮಕವಾಗಿ ಇದ್ದೇವಾ ಎಂಬುದನ್ನು ಕಂಡುಕೊಳ್ಳಿ. ನಿಮ್ಮ ಮನಸಿನಲ್ಲಿನ ನಕರಾತ್ಮಕ ಅಂಶಗಳನ್ನು ತೊಡೆದು ಹಾಕಿ ಧನಾತ್ಮಕವಾಗಿ ಚಿಂತನೆ ಮಾಡಿ, ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.

ಸತ್ಯವನ್ನು ನುಡಿ, ಧರ್ಮದಿಂದ ನಡೆ, ತಾಯಿಯೇ ದೇವರು, ತಂದೆ ಗುರು, ಅತಿಥಿ ಶಿಕ್ಷಕರನ್ನು ದೇವರೆಂದು ಗೌರವಿಸಿ ಎಂದು ಕುಲಪತಿ ಪದವಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಮೊದಲು ತಂದೆ-ತಾಯಿ, ನಂತರ ಸಮಾಜ, ತದಾದನಂತರ ಶಿಕ್ಷಣ ಕಲಿಸಿದ ಸಂಸ್ಥೆಗೆ ಚಿರ ಋಣಿಗಳಾಗಿರಬೇಕು. ಇದಲ್ಲದೆ, ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಮೌಲ್ಯಯುತ ಬದುಕು ಸಾಗಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು..
ಕಾರ್ಯಕ್ರಮದಲ್ಲಿ ದಾವಣಗೆರೆದ ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಡಾ ವಿಶ್ವನಾx, ಪ್ರಾಂಶುಪಾಲೆ ಪ್ರತಿಭಾ ದೊಗ್ಗಳ್ಳಿ, ಕಾರ್ಯದರ್ಶಿ ದೊಗ್ಗಳ್ಳಿ ಪುಟ್ಟರಾಜು ಉಪಸ್ಥಿತರಿದ್ದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 9844460336, 7483892205



