ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೆ ಟಿ20 ಮಂದ್ಯದಲ್ಲಿಯೂ ಭಾರತ ಸೂಪರ್ ಓವರ್ ನಲ್ಲಿ ಸೂಪರ್ ಜಯ ದಾಖಲಿಸಿತು. ಈ ಮೂಲಕ 5 ಟಿ20 ಪಂದ್ಯಗಳಲ್ಲಿ ಭಾರತ 4-0 ಮುನ್ನೆಡೆ ಕಾಯ್ದುಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕಂಡು 165 ರನ್ ಗಳಿಸಿತ್ತು. ಕನ್ನಡಿಗರಾದ ಕೆ.ಎಲ್ ರಾಹುಲ್ 34 ಮತ್ತು ಮನೀಶ್ ಪಾಂಡೆ 50 ರನ್ ಗಳ ಗಳಿಸಿದರು. ಈ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್ ಕೂಡ 20 ಓವರ್ ನಲ್ಲಿ 7 ವಿಕೆಟ್ ಕಳೆದುಕೊಂಡು165 ರನ್ ಗಳಿಸಿದ್ದರಿಂದ ಪಂದ್ಯ ಟೈ ಆಯ್ತು. ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೊಗಲಾಯಿತು.
WHAT A WIN – 📸📸
A night to remember 🇮🇳💯 #TeamIndia #NZvIND pic.twitter.com/AMqNx1aWjz— BCCI (@BCCI) January 31, 2020
ಕೊನೆಯ ಕೊನೆಯ ಓವರ್ ನಲ್ಲಿ ನ್ಯೂಜಿಲೆಂಡ್ ಗೆ 7 ರನ್ ಬೇಕಿತ್ತು. ಆದರೆ, ಯುವ ಬೌಲರ್ ಶಾರ್ದೂಲ್ ಠಾಕೂರ್ ಅವರ ಭರ್ಜರಿ ಬೌಲಿಂಗ್ ನಿಂದಾಗಿ 3 ವಿಕೆಟ್ ಕಳೆದುಕೊಂಡಿದ್ದಲ್ಲದೆ, 6 ರನ್ ಮಾತ್ರ ಕಲೆಹಾಕಲು ಸಾಧ್ಯವಾಯಿತು. ಇದರಿಂದ ಪಂದ್ಯ ಡ್ರಾ ಮಾಡಿಕೊಂಡಿತು. ಈ ಮೂಲಕ ನಾಲ್ಕನೇ ಪಂದ್ಯದಲ್ಲಿಯಾದರೂ ಗೆದ್ದುಕೊಳ್ಳಬೇಕು ಎಂದುಕೊಂಡಿದ್ದ ನ್ಯೂಜಿಲೆಂಡ್ ಗೆ ಮತ್ತೆ ಮುಖಭಂಗವಾಯಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 1 ವಿಕೆಟ್ ಕಳೆದುಕೊಂಡು13 ರನ್ ಗಳಿಸಷ್ಟೇ ಸಾಧ್ಯವಾಯಿತು. ಈ ಮೊತ್ತವನ್ನು ಭಾರತ ಕೇವಲ ಐದು ಎಸೆತಗಳಲ್ಲೇ ಮುಟ್ಟಿ ಸೂಪರ್ ಓವರ್ ನಲ್ಲಿ ಮತ್ತೊಂದು ಗೆಲುವು ದಾಖಲಿಸಿತು. ಮೊದಲ ಎಸೆತದಲ್ಲಿ ಸಿಕ್ಸ್ ಎತ್ತಿದ ಕೆ.ಎಲ್. ರಾಹುಲ್, ಎರಡನೆ ಎಸೆತವನ್ನು ಬೌಂಡರಿ ಬಾರಿಸಿಸಿದರು. ಮೂರನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಕೈ ಹಾಕಿ ಔಟ್ ಆದರು. ಕೊನೆಯಲ್ಲಿ ಕ್ಯಾಪ್ಟನ್ ಕೊಯ್ಲಿ ಬೌಂಡರಿ ಬಾರಿಸುವ ಮೂಲಕ ಗೆಲುವು ತಂದಿತ್ತರು.
Another win in the Super Over 🙌🙌 #TeamIndia go 4-0 up in the series. 🇮🇳🇮🇳 #NZvIND pic.twitter.com/G6GqM67RIv
— BCCI (@BCCI) January 31, 2020
ಸರಣಿಯ ಮೂರನೇ ಪಂದ್ಯವೂ ಟೈ ಆಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 179 ರನ್ ಗಳಿಸಿತ್ತು. ಮೊತ್ತ ಬೆನ್ನಟ್ಟಿದ್ದ ನ್ಯೂಜಿಲೆಂಡ್ ಕೂಡ 179 ರನ್ ಗಳಿಸಿತ್ತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಬೀಸಿದ ನ್ಯೂಜಿಲೆಂಡ್ 17 ರನ್ ಗಳಿಸಿತ್ತು. ಈ ಮೊತ್ತವನ್ನು ರೋಹಿತ್ ಶರ್ಮಾ ಅವರ ಕೊನೆಯ ಎರಡು ಎಸೆತಗಳ ಸೂಪರ್ ಸಿಕ್ಸ್ ನಿಂದ ಭಾರತ 20 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು.
ಹಿಟ್ ಮ್ಯಾನ್ ರೋಹಿತ್ ಶರ್ಮಾ, ಮೊಹಮದ್ ಶಮಿ ಮತ್ತು ರವೀಂದ್ರ ಜಡೇಜಾ ಬದಲು ಸ್ಯಮ್ ಸನ್, ವಾಷಿಂಗ್ಟನ್ ಸುಂದರ್, ನವದೀಪ್ ಶೈನಿ ಅವರಿಗೆ ಅವಕಾಶ ನೀಡಲಾಗಿತ್ತು.



