ದಾವಣಗೆರೆ: ಜಿಲ್ಲಾ ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಳ ಸಹಯೋಗದಲ್ಲಿ ಆಟೋ ಚಾಲಕರಿಗೆ ಚಾಲಕರ ಪರವಾನಿಗೆ ಪತ್ರ ಮತ್ತು ವಾಹನ ನೊಂದಾಣಿ ಪತ್ರ, ವಾಯು ಮಾಲಿನ್ಯ ಪತ್ರ, ಫಿಟ್ನೆಸ್ ಪ್ರಮಣ ಪತ್ರ, ಅನುಮತಿ ಪತ್ರ, ವಿಮೆ ಪತ್ರದ ಸಂಚಾರಿ ನಿಮಯ ಪಾಲನೆ ಅರಿವು ಮೂಡಿಸುವ ಕಾರ್ಯಾಗರವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿರುವ ಪೊಲೀಸ್ ಭವನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ ಸಂತೋಷ್ ಅಧ್ಯಕ್ಷತೆಯಲ್ಲಿ ಹಾಗೂ ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್ ಉಪಸ್ಥಿತಿಯಲ್ಲಿ ದಾವಣಗೆರೆ ನಗರದ ಆಟೋ ಚಾಲಕರಿಗೆ ಚಾಲಕರ ಪರವಾನಿಗೆ ಪತ್ರ ಮತ್ತು ವಾಹನ ನೊಂದಾಣಿ ಪತ್ರ, ವಾಯು ಮಾಲಿನ್ಯ ಪತ್ರ, ಫಿಟ್ನೆಸ್ ಪ್ರಮಣ ಪತ್ರ, ಅನುಮತಿ ಪತ್ರ, ವಿಮೆ ಪತ್ರ ಮಾಡಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರ ನಡೆಸಿದರು.
ಕಾರ್ಯಗಾರದಲ್ಲಿ ನಗರ ಡಿ ವೈ ಎಸ್ ಪಿ ಮಲ್ಲೇಶ್ ದೊಡ್ಮನಿ, ಸಂಚಾರಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ನಲವಾಗಲು, ಆರ್ ಟಿ ಓ ನಿರೀಕ್ಷಕ ಸತೀಶ್ ಕುಮಾರ್ ದಾವಣಗೆರೆ ನಗರದ ಆಟೋ ಮಾಲಿಕರುಗಳು/ಚಾಲಕರುಗಳು ಭಾಗವಹಿಸಿದ್ದರು.



