ದಾವಣಗೆರೆ: ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ಬೋರ್ ಕೊರೆಯಲು ಬಂದಿದ್ದ ಎರಡು ಲಾರಿಗಳು ಧಗಧಗನೆ ಹೊತ್ತಿ ಉರಿವೆ. ನೋಡ ನೋಡುತ್ತಿದ್ದಂತೆ ಇಡೀ ಲಾರಿಗಳಿಗೆ ಬೆಂಕಿ ಆವರಿಸಿ ಸುಟ್ಟು ಭಸ್ಮವಾಗಿವೆ.
ಈ ಘಟನೆ ದಾವಣಗೆರೆ ತಾಲೂಕಿನ ಹೊಸ ಕೊಳೇನಹಳ್ಳಿ ಗ್ರಾಮದಲ್ಲಿ ಜಮೀನು ಒಂದರಲ್ಲಿ ಘಟನೆ ನಡೆದಿದೆ. ಆಕಸ್ಮಿಕವಾಗಿ ಲಾರಿಗೆ ಬೆಂಕಿ ಹತ್ತಿಕೊಂಡಿದೆ. ಬಳಿಕ ಅಲ್ಲೇ ಇದ್ದ ಮತ್ತೊಂದು ಲಾರಿಗೂ ಬೆಂಕಿ ಆವರಿಸಿದೆ. ಬೆಂಕಿ
ನಂದಿಸಲು ಎಷ್ಟೇ ಪ್ರಯತ್ನಿಸಿದರೂ ನಿಯಂತ್ರಣಕ್ಕೆ ಬಮದಿಲ್ಲ. ಅಗ್ನಿಶಾಮ ದಳ ವಾಹನ ಬರುವಷ್ಟರಲ್ಲಿ ಎರಡು ಲಾರಿಗಳು ಸಂಪೂರ್ಣ ಸುಟ್ಟಿವೆ.
ಹೊಸ ಕೊಳೇನಹಳ್ಳಿ ಗ್ರಾಮದ ಧರ್ಮರಾಯ ಎಂಬುವವರ ಜಮೀನಿನಲ್ಲಿ ಬೋರ್ ಕೊರೆಯುತ್ತಿದ್ದಾಗ ಈ ಘಟನೆ ನಡೆದಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.



