ದಾವಣಗೆರೆ: ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ ವೇಳಾಪಟ್ಟಿ ಪ್ರಕಾರ ಸೋಮವಾರ ತಡ ರಾತ್ರಿಯಿಂದಲೇ ನೀರು ಬಿಡುಗಡೆ ಮಾಡಲಾಗಿದೆ. ನಿನ್ನೆ (ಜ.16) 700 ಕ್ಯೂಸೆಕ್ಸ್ ನೀರು ಹರಿ ಬಿಟ್ಟಿದ್ದು, ಇಂದು 1500 ಕ್ಯೂಸೆಕ್ಸ್ ನಷ್ಟು ನೀರಿನ ಹರಿವು ಹೆಚ್ಚಿಸಲಾಗಿದೆ.
ಜ.6 ರಂದು ನಡೆದ ಭದ್ರಾ ಕಾಡಾ ಸಭೆಯಲ್ಲಿ ಜ. 20 ರಿಂದಆಫ್ ಅಂಡ್ ಆನ್ ಪದ್ದತಿಯಲ್ಲಿ ನೀರು ಹರಿಸಲು ತೀರ್ಮಾನಿಸಲಾಗಿತ್ತು. ನಂತರ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದ್ದು, ಜ. 15 ರಿಂದ 12ದಿನ ನಾಲೆಯಲ್ಲಿ ನೀರು ಹರಿಸಲು ಸೂಚನೆ ನೀಡಲಾಗಿತ್ತು.
ವೇಳಾಪಟ್ಟಿ ಪ್ರಕಾರ ಭದ್ರಾ ಬಲದಂಡೆ (ದಾವಣಗೆರೆ-ಮಲೆಬೆನ್ನೂರು) ವಿಭಾಗಕ್ಕೆ ಜನವರಿ 20ರ ಬದಲು ಜನವರಿ 15 ರಿಂದಲೇ 12 ದಿನ ನೀರು ಹರಿಸಿ, 20 ದಿನ ನಿಲ್ಲಿಸಿ ಒಟ್ಟು 53 ದಿನಗಳ ಕಾಲ ನೀರು ಹರಿಸುವುದು. ಎಡದಂಡೆಗೆ 70 ದಿನ ಬಲದಂಡೆಗೆ ಕೇವಲ 53 ದಿನ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.



