ದಾವಣಗೆರೆ: ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ಚನ್ನಗಿರಿ ಪಟ್ಟಣದಲ್ಲಿ ಚನ್ನಗಿರಿ ಪೊಲೀಸರು ಯಮ ಪಾತ್ರದ ಮೂಲಕ ಸಂಚಾರಿ ನಿಯಮಗಳ ಪಾಲನೆ ಜಾಗೃತಿಯನ್ನು ವಿಭಿನ್ನವಾಗಿ ಹಮ್ಮಿಕೊಳ್ಳಲಾಗಿತ್ತು.
ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಹೆಲ್ಮೆಟ್ ರಹಿತ ವಾಹನ ಚಾಲನೆ, ತ್ರಿಬಲ್ ರೈಡಿಂಗ್ ಚಾಲನೆ ಮಾಡುವಂತಹ ವಾಹನ ಚಾಲಕರಿಗೆ ಯಮ ಪಾಶ ಹಾಕಿ ಎಚ್ಚರಿಸುತ್ತಾ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಯಿತು. ಸಂಚಾರ ನಿಯಮಗಳು ಇರುವುದು ನಿಮ್ಮಗಳ ಜೀವ ರಕ್ಷಣೆಗಾಗಿ ಆದ್ದರಿಂದ ಎಲ್ಲಾ ವಾಹನ ಸವಾರರು ರಸ್ತೆ ಸುರಕ್ಷತಾ ಸಂಚಾರ ನಿಯಮಗಳನ್ನು ಪಾಲಿಸಿ ಎಂದು ಪೊಲೀಸರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಮಾಡುತ್ತಿರುವಂತಹ ವಾಹನ ಚಾಲಕರಗಳಿಗೆ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಇಲ್ಲದಿದ್ದರೆ ಅಪಘಾತಗಳು ಸಂಭವಿಸಿ ಪ್ರಾಣ ಹಾನಿಯಾಗುತ್ತದೆ. ನಿಮ್ಮ ನಂಬುದ ಕುಟುಂಬ ಸದಸ್ಯರಿಗೆ ದಿಕ್ಕಿಲ್ಲದಂತಾಗುತ್ತದೆ ಎಂದು ಜಾಗೃತಿ ಮೂಡಿಸಲಾಯಿತು.
ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಿರಂಜನ್ ರವರು, ಪಿಎಸ್ಐ ಗಳಾದ ಗುರುಶಾಂತಯ್ಯ , ಶ್ರೀಮತಿ ರೂಪ್ಲಿ ಬಾಯಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.



