ದಾವಣಗೆರೆ: 7ನೇ ವೇತನ ಆಯೋಗ ಹಾಗೂ ಹಳೇ ಪಿಂಚಣಿ ಯೋಜನೆ ಜಾರಿ ಮಾಡಲು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಹರಿಹರ ತಾಲ್ಲೂಕು ಘಟಕದಿಂದ ಶಾಸಕ ಬಿ.ಪಿ.ಹರೀಶ್ ಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ 7ನೇ ವೇತನ ಆಯೋಗ ಜಾರಿಗೆ ತಂದಿದ್ದು, ರಾಜ್ಯ ಸರ್ಕಾರವೂ 7ನೇ ವೇತನ ಆಯೋಗ ಜಾರಿಗೆ ತರಬೇಕು.ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ.ವೇತನ, ಸೌಲಭ್ಯ ಕೂಡ ಸಮಾನವಾಗಿರಬೇಕು. ಸರ್ಕಾರವು ವೇತನ ಆಯೋಗದ ವರದಿ ಪಡೆದು ಈಗಾಗಲೇ ನೀಡಿರುವ ಶೇ.17ರ ಮಧ್ಯಂತರ ಪರಿಹಾರ ಭತ್ಯೆ ಸೇರಿ ಶೇ. 40 ಸೌಲಭ್ಯವನ್ನು ರಾಜ್ಯ ಸರ್ಕಾರಿ ನೌಕರರಿಗೆ 2022ರ ಜು.1ರಿಂದಲೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಜೂನ್ 2005ರ ನಂತರ ನೇಮಕವಾದ ರಾಜ್ಯ ಸರ್ಕಾರಿ ನೌಕರರಿಗೆ ನೀಡಿರುವ ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸಿ, ಹಳೇ ಪಿಂಚಣಿ ಪದ್ಧತಿ ಮುಂದುವರಿಸಬೇಕು. ಪಂಜಾಬ್, ರಾಜಸ್ಥಾನ, ಛತ್ತೀಸಗಢ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶಯಗಳಲ್ಲಿ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿದ್ದು, ರಾಜ್ಯ ಸರ್ಕಾರವೂ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ಪಿಂಚಣಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಎ.ಕೆ.ಭೂಮೇಶ್, ಪದಾಧಿಕಾರಿಗಳಾದ ಎಂ.ಉಮ್ಮಣ್ಣ, ಎಂ.ವಿ.ಹೊರಕೇರಿ, ರೇವಣಸಿದ್ದಪ್ಪ ಅಂಗಡಿ, ಡಿ.ಎಂ.ಮಂಜುನಾಥಯ್ಯ, ಚಂದ್ರಪ್ಪ ದೊಗ್ಗಳ್ಳಿ, ಶರಣಕುಮಾರ ಹೆಗಡೆ, ವಿ.ಬಿ.ಕೊಟ್ರೇಶಪ್ಪ, ದಾದಾಪೀರ್, ಮುಷ್ತಾಕ್ ಅಹಮ್ಮದ್, ಮಂಜುನಾಥ್, ಪ್ರಕಾಶ್ ಇದ್ದರು.



