ಬೆಂಗಳೂರು: ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಸರ್ಕಾರ ಸುವರ್ಣಾವಕಾಶ ಕಲ್ಪಿಸಿದ್ದು, ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 ಅರಣ್ಯ ರಕ್ಷಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅದು ಯಾವುದೇ ಪರೀಕ್ಷೆ ಇಲ್ಲದೆ, ಪಿಯುಸಿ ಮೆರಿಟ್ ಅಂಕದ ಆಧಾರ ಮೇಲೆ ನೇರ ನೇಮಕಾತಿ ನಡೆಯಲಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಅರಣ್ಯ ಇಲಾಖೆ ವೆಬ್ ಸೈಟ್ https://aranya.gov.in ಮೂಲಕ ಅರ್ಜಿ ಸಲ್ಲಿಸಬೇಕು.
ಕರ್ನಾಟಕ ಅರಣ್ಯ ಇಲಾಖೆಯಲ್ಲಿ 2023-24ನೇ ಸಾಲಿನಲ್ಲಿ 540 ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳಂತೆ
‘ಅರಣ್ಯ ರಕ್ಷಕ’) ಗ್ರಾಪ್ ‘ಸಿ’ ಹುದ್ದೆಗಳಿಗೆ ನೇರ ನೇಮಕಾತಿ ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಾವಳಿ ಅನ್ವಯ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 (=506 ಸರ್ಕಾರವು ಅನುಮತಿಸಿರುವ ಹುದ್ದೆಗಳು + 34 ಹಿಂದಿನ ಅಧಿಸೂಚನೆಯಲ್ಲಿನ ಹಿಂಬಾಕಿ ಹುದ್ದೆಗಳು) ಗಸ್ತು
ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳಂತೆ ‘ಅರಣ್ಯ ರಕ್ಷಕ) ಗ್ರೂಪ್ ‘ಸಿ’ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕಿದೆ. ಅರ್ಜಿಗಳನ್ನು ದಿನಾಂಕ: 01.12.2023 ರಿಂದ 30.12.2023ರವರೆಗೆ ಸಲ್ಲಿಸಲು ಅವಕಾಶವಿದ್ದು,
ನಿಗದಿತ ಅರ್ಜಿ ಶುಲ್ಕವನ್ನು ಅಂಚೆ ಕಛೇರಿಗಳಲ್ಲಿ ಪಾವತಿಸಲು ಕೊನೆಯ ದಿನಾಂಕ: 05.01.2024ನ್ನು ನಿಗದಿಪಡಿಸಲಾಗಿರುತ್ತದೆ. ಆನ್ ಲೈನ್ ವಿಧಾನವನ್ನು ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.
ಈ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹಾಗೂ ಆನ್‌ಲೈನ್ ಅರ್ಜಿಯನ್ನು ಕರ್ನಾಟಕ ಅರಣ್ಯ ಇಲಾಖೆಯ ಜಾಲತಾಣ
https://aranya.gov.in ಮುಖಪುಟದ ಕೆಳಭಾಗದಲ್ಲಿ ಇರುವ “ನೇಮಕಾತಿ” ಶೀರ್ಷಿಕೆಯಡಿ ಪ್ರಕಟಿಸಲಾಗುವುದು ಎಂದು ಇಲಾಖೆ ಪತ್ರಿಕಾ ಜಾಹೀರಾತು ನೀಡಿದೆ.



