ದಾವಣಗೆರೆ: ಮನೆಯಲ್ಲೇ ಕುಳಿತು ಹಣಗಳಿಸಬಹುದೆಂಬ ಅಪರಿಚಿತರ ಮಾತು ನಂಬಿ ಮಹಿಳೆಯೊಬ್ಬರು 7.69 ಲಕ್ಷ ಕಳೆದುಕೊಂಡ ಘಟನೆ ನಗರದ ಕೆ.ಬಿ. ಬಡಾವಣೆಯ ಕಿರ್ವಾಡಿ ಲೇಔಟ್‌ನಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಕೆಲ ವಿಡಿಯೋಗಳನ್ನು ಪ್ರಚಾರ ಮಾಡಿದ್ರೆ ಮನೆಯಲ್ಲೇ ಕುಳಿತು ಹಣಗಳಿಸಬಹುದು ಎಂಬುದಾಗಿ ನಂಬಿಸಿ ಬರೋಬ್ಬರಿ 7.69 ಲಕ್ಷ ರೂ. ವಂಚನೆ ಮಾಡಲಾಗಿದೆ. ಕಿರ್ವಾಡಿ ಲೇಔಟ್ನ ನಿವಾಸಿ ವಿದ್ಯಾ ಹಣ ಕಳೆದುಕೊಂಡ ಮಹಿಳೆ. ಆ್ಯಪ್ನಲ್ಲಿ ಪರಿಚಯವಾದ ಅಪರಿಚಿತ ವ್ಯಕ್ತಿ, ವಿಡಿಯೋಗಳನ್ನು ಪ್ರೊಮೋಟ್ ಮಾಡಿದರೆ ಮನೆಯಲ್ಲೇ ಕೂತು ಹಣಗಳಿಸಬಹುದು ಎಂದು ನಂಬಿಸಿದ್ದಾನೆ. ಹಣ ಗಳಿಸಬೇಕಾದ್ರೆ ಕೆಲ ಟಾಸ್ಕ್ಗಳನ್ನು ಪೂರೈಸಬೇಕು ಎಂದು ಹೇಳಿದ್ದಾನೆ.ಈ ಅಪರಿಚಿತ ವ್ಯಕ್ತಿಯನ್ನು ನಂಬಿದ ವಿದ್ಯಾ ಅವರು ಟಾಸ್ಕ್ಗಳನ್ನು ಪೂರೈಸುವ ನೆಪದಲ್ಲಿ ಹಂತ ಹಂತವಾಗಿ 7.69 ಲಕ್ಷ ಕಳೆದುಕೊಂಡಿದ್ದಾರೆ. ಖಾತೆಯಲ್ಲಿನ ಹಣ ಕಾಲೆದುಕೊಂಡ ನಂತರ ಮೋಸ ಹೋಗಿದ್ದೇನೆ ತಿಳಿದೆ ಎಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



