ದಾವಣಗೆರೆ: ಜಿಲ್ಲೆಯ ಮೂವರಿಗೆ 68ನೇ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ 2023ನೇ ಸಾಲಿನ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಸಂಘ ಸಂಸ್ಥೆ ಗಳಿಗೆ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿ ಮೌಲಾನ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘಕ್ಕೆ ನೀಡಲಾಗಿದೆ.
ಬಂಜಾರ ಸಮುದಾಯದ ಪ್ರಪ್ರಥಮ ಇಂಜಿನಿಯರ್ ಕೆ. ರೂಪ್ಲಾನಾಯಕ್, ಹಕ್ಕಿಪಿಕ್ಕಿ ಜನಾಂಗದ ಅಭಿಜಾತೆ ಕಲಾವಿದೆ, ಜಾನಪದ ಹಾಡುಗಾರ್ತಿ ಶಿವಂಗಿ ಶಣ್ಮರಿ, ದೇವಸ್ಥಾನಗಳ ಗೋಪುರ ನಿರ್ಮಾಣದಲ್ಲಿ ನೈಪುಣ್ಯತೆ ಸಾಧಿಸಿರುವ ಟಿ. ಶಿವಶಂಕರ್ ಪ್ರಸ್ತಕ್ತ ಸಾಲಿನ ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನರಾಗಿರುವ ಮಹಾನ್ ಸಾಧಕರು. ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಯಲ್ಲಿ ತೋಡಗಿದ ಮೌಲಾನ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.



