ದಾವಣಗೆರೆ: ಜಿ.ಬಿ.ವಿನಯ್ ಕುಮಾರ್ ಅಭಿಮಾನಿ ಬಳಗದಿಂದ ನಗರದ ಆಟೋ ಮತ್ತು ಗೂಡ್ಸ್ ಚಾಲಕರ ಮಕ್ಕಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.70 ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಹೆಸರು ನೋಂದಣಿಗೆ ಅರ್ಜಿ ಆಹ್ವಾನಿಸಿದೆ.
ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ, ಆಧಾರ್‌ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಅ. 30ರೊಳಗೆ ಜಿ.ಬಿ.ವಿನಯ್
ಕುಮಾರ್ ಕಕ್ಕರಗೊಳ್ಳ, ಇನ್‌ಸೈಟ್ಸ್ ಐಎಎಸ್ ತರಬೇತಿ ಕೇಂದ್ರದ ಸಂಸ್ಥಾಪಕರು, 2415/45, 10 ನೇ ಕ್ರಾಸ್,ಅಥಣಿ ಕಾಲೇಜ್ ಹತ್ತಿರ, ಎಸ್.ಎಸ್. ಲೇಔಟ್ ಎ ಬ್ಲಾಕ್, ದಾವಣಗೆರ. ಹೆಚ್ಚಿನ ಮಾಹಿತಿಗೆ: 7676680136,
9353452348 ಸಂಪರ್ಕಿಸಿ.



