ದಾವಣಗೆರೆ; ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಡಾ.ಬಾಬು ಜಗಜೀವನ್ ರಾಂ ದ್ವಿಚಕ್ರ ವಾಹನ ಸರಕು ಸಾಗಾಣಿಕ ಯೋಜನೆ ಅಡಿ 16.80 ಲಕ್ಷ ಮೊತ್ತದ 24 ಫಲಾನುಭವಿಗಳಿಗೆ ದ್ವಿಚಕ್ರವಾಹನ್ನು ಶಾಸಕ ಬಿ.ದೇವೇಂದ್ರಪ್ಪ ವಿತರಿಸಿದರು.
ನಂತರ ಮಾತನಾಡಿ,ಪ್ರಾಮಾಣಿಕವಾಗಿ ಕೆಲಸ ಮಾಡಿ. ಜನ ಸಾಮಾನ್ಯರಿಗೆ ಸಲ್ಲಬೇಕಾದ ಸರ್ಕಾರದ ಯೋಜನೆಗಳು, ಸೇವೆಗಳು ಅರ್ಹ ಫಲಾ ನುಭವಿಗಳಿಗೆ ಸಲ್ಲಬೇಕು. ಸಂವಿಧಾನ ಬದ್ಧವಾಗಿ ಕೊಟ್ಟ ಅಧಿಕಾರವನ್ನು ಜನ ಸಾಮಾನ್ಯರಿಗೆ ಸರಿಯಾಗಿ ತಲುಪಿಸಿ ಎಂದರು.
ತಹಸೀಲ್ದಾರ್‌ಸೈಯದ್ ಕಲೀಂ ಉಲ್ಲಾ ಮಾತನಾಡಿ, ಸರ್ಕಾರದ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ತಲುಪಬೇಕಾದರೆ ಅಧಿಕಾರಿಗಳ ಪಾತ್ರ ದೊಡ್ಡದು. ಸರ್ಕಾರ ಆದೇಶದಂತೆ ನಿಗದಿತ ಸಮಯದ ಒಳಗೆ ಫಲಾನುಭವಿಗಳಿಗೆ ತಲುಪಿದರೆ ಮಾತ್ರ
ಸರ್ಕಾರದ ಆಶಯ ಈಡೇರುತ್ತದೆ. ಸರ್ಕಾರಿ ಆದೇಶದಂತೆ ಶ್ರಮಿಸುತ್ತೇವೆ ಎಂದರು.
ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಾ ವೀರ್‌ಸಜ್ಜನ್ , ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಪಪಂ ಸದಸ್ಯ
ತಾನಾಜಿ ಗೋಸಾಯಿ, ಆಲಿ, ಮೊಹಮದ್ ಗೌಸ್, ಪಿಎಸ್‌ಐ ಸಾಗರ್, ಪಲ್ಲಾಗಟ್ಟೆ ಶೇಖರಪ್ಪ ಇತರರಿದ್ದರು.



