ದಾವಣಗೆರೆ; ಪ್ರಸಕ್ತ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ದಾವಣಗೆರೆ ತಾಲ್ಲೂಕಿನಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಣ್ಣ, ಅತಿಸಣ್ಣ ಹಾಗೂ ಪ.ಜಾತಿ, ಪ.ಪಂಗಡ ವರ್ಗದ ರೈತರಿಗೆ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕೈಗೊಳ್ಳಲು ಹಾಗೂ ಇನ್ನಿತರೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ.
ಆಸಕ್ತ ರೈತರು ಕಸಬಾ ಹೋಬಳಿ ಚೇತನ.ಕೆ ಮೊ.ಸಂ: 9686334350, ಮಾಯಕೊಂಡ-1 ಹೋಬಳಿ ರಮೇಶ.ಬಿ.ಎಸ್ 6364642155, ಮಾಯಕೊಂಡ-2 ಹೋಬಳಿ ಅರುಣ್ ರಾಜ್.ಪಿ.ಎಲ್ ಮೊ.ಸಂ: 9902866619, ಆನಗೋಡು ಹೋಬಳಿ ರವಿ ನಾಗಪ್ಪ ದಾಳೇರ ಮೊ.ಸಂ:7019819101 ಇವರನ್ನು ಸಂಪರ್ಕಿಸಲು ಜಿ.ಪಂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.



