ದಾವಣಗೆರೆ: ಭದ್ರಾ ಡ್ಯಾಂನಿಂದ ನಾಲೆಗಳಿಗೆ ಆನ್ ಅಂಡ್ ಆಫ್ ವ್ಯವಸ್ಥೆ ಬದಲು, ಈ ಹಿಂದೆ ನಿರ್ಧರಿಸಿದಂತೆ ನಿರಂತರ 100 ದಿನ ನೀರು ಹರಿಸಬೇಕು ಎಂದು ಆಗ್ರಹಿಸಿ ಭಾರತೀಯ ರೈತ ಒಕ್ಕೂಟ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಜಿಲ್ಲಾಡಳಿತ, ಸರ್ಕಾರವಾಗಲೇ ಇದುವರೆಗೂ ರೈತರ ಬೇಡಿಕೆ ಈಡೇರಿಸುವ ಭರವಸೆ ನೀಎಡಿಲ್ಲ. ಹೀಗಾಗಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ನಾಳೆ (ಸೆ. 25) ದಾವಣಗೆರೆ ಬಂದ್ ಗೆ ಕರೆಕೊಟ್ಟಿದ್ದು, ಬೆಳಗ್ಗೆಯಿಂದಲೇ ಬಂದ್ ನಡೆಸಲು ರೈತರ ನಿರ್ಧರಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡರು, ಜನ ಪ್ರತಿನಿಧಿಗಳು ಪೂರ್ವಭಾವಿ ಸಭೆ ನಡೆಸಿದರು. ಭದ್ರಾ ನಾಳೆಯಿಂದ ನೀರು ನಿಲ್ಲಿಸಲಾಗಿದ್ದು, ಇದರಿಂದ ಅಚ್ಚುಕಟ್ಟಿನ ರೈತರ ಭತ್ತದ ಬೆಳೆ ಒಣಗುತ್ತಿವೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಈಗಾಗಲೇ ಮನವಿ ಕೊಟ್ಟಿದ್ದೇವೆ. ಆದರೆ, ನೀರು ಹರಿಸುವ ಕುರಿತಂತೆ ಇದುವರೆಗೆ ಸರ್ಕಾರದಿಂದ ಯಾವುದೇ ಲಿಖಿತ ಆದೇಶ ಬಂದಿಲ್ಲ. ಸೋಮವಾರ ಬೆಳಿಗ್ಗೆ 7.30ಕ್ಕೆ ಜಯದೇವ ವೃತ್ತದಲ್ಲಿ ಸಭೆ ಸೇರಿ ಸರ್ಕಾರದ ನಡೆಯನ್ನು ರೈತರು ಖಂಡಿಸಲಿದ್ದಾರೆ.
ರಾಜ್ಯ ಸರ್ಕಾರವು ನೀರು ಹರಿಸುವುದಾಗಿ ಕೊಟ್ಟ ಭರವಸೆಯಂತೆ ನಡೆದುಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎನ್ನುತ್ತಾರೆ. ಆದರೆ, ನೀರು ಹರಿಸುವ ವಿಚಾರದಲ್ಲಿ ಕೊಟ್ಟ ಭರವಸೆ ಈಡೇರಿಸಿಲ್ಲ. ಎಕರೆಗೆ 20 ರಿಂದ 30ಸಾವಿರ ರೂಪಾಯಿ ಖರ್ಚು ಆಗುತ್ತೆ. ಆದರೆ, ಈಗ ಏಕಾಏಕಿ ನೀರು ನಿಲ್ಲಿಸಿದ್ರೆ ಭತ್ತ ಬೆಳೆಗಾರರ ಪರಿಸ್ಥಿತಿ ಏನು ಎಂಬುದು ಊಹಿಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಆನ್ ಅಂಡ್ ಆಫ್ ವ್ಯವಸ್ಥೆಯನ್ನು ನಾವು ಒಪ್ಪುವುದಿಲ್ಲ. 100 ದಿನ ನಿರಂತರ ನೀರು ಹರಿಸುವುದಾಗಿ ಹೇಳಿ. ಈಗ ಏಕಾಏಕಿ ನೀರು ನಿಲ್ಲಿಸಲಾಗಿದೆ. ಈಗಾಗಲೇ 40 ದಿನನೀರು ಹರಿಸಿ ಒಂದು ವಾರದಿಂದ ನೀರು ಸ್ಥಗಿತಗೊಳಿಸಲಾಗಿದೆ. ಈ ಹಿಂದೆ ಭದ್ರಾಡ್ಯಾಂ 156 ಅಡಿ ಇದ್ದಾಗಲೂ ನೀರು ಕೊಟ್ಟ ಉದಾಹರಣೆ ಇದೆ. ಆದ್ದರಿಂದ ಕೂಡಲೇ ನೀರು ಹರಿಸಬೇಕು. ನಾವು ಯಾರ ವಿರುದ್ಧವೂ ಇಲ್ಲ. ರೈತರ ಪರವಿದ್ದೇವೆ. ಅಕ್ಕಿ ಬೆಲೆ ದಿನ ಕಳೆದಂತೆ ಏರಿಕೆಯಾಗುತ್ತಿದೆ. ಈಗ ನಷ್ಟವಾಗುವ ಭತ್ತಕ್ಕೆ ಸರ್ಕಾರದಿಂದ ಪರಿಹಾರ ಕೊಡಲು ಸಾಧ್ಯವೇ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಲಿಂಗರಾಜ್ ಕಿಡಿಕಾರಿದರು.
ರೈತ ಒಕ್ಕೂಟ ಕರೆ ನೀಡಿರುವ ದಾವಣಗೆರೆ ಬಂದ್‌ಗೆ ದಾವಣಗೆರೆ ಜಿಲ್ಲಾ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಗಾರರ ಸಂಘ ಬೆಂಬಲ ಸೂಚಿಸಿದೆ.ಬಂದ್ ಗೆ ಜಿಲ್ಲಾ ಕಸಾಪ ನೈತಿಕ ಬೆಂಬಲ ಸೂಚಿಸಲಿದೆ ಎಂದು ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ರೈತ ಮುಖಂಡರಾದ ಬೆಳವನೂರು ಬಿ. ನಾಗೇಶ್ವರ ರಾವ್ ರವರು, ಎಚ್. ಆರ್. ಲಿಂಗರಾಜ್, ಬಿಜೆಪಿ ಮುಖಂಡರಾದ ಯಶವಂತ ರಾವ್ ಜಾಧವ್, ಅಣಬೇರು ಜೀವನ್ ಮೂರ್ತಿ, ಕೊಂಡಜ್ಜಿ ಜಯಪ್ರಕಾಶ್, ಎಲ್.ಎನ್. ಕಲ್ಲೇಶ್, ಅಜಯ್ ಕುಮಾರ್ ಬಿ. ಜೆ., ರಾಜನಹಳ್ಳಿ ಶಿವಕುಮಾರ್, ಕೊಳೇನಹಳ್ಳಿ ಸತೀಶ್ ರವರು, ಶಿವಪ್ರಕಾಶ್, ಕಡ್ಲೆಬಾಳು ಧನಂಜಯ್ ಸೇರಿದಂತೆ ರೈತ ಮುಖಂಡರು ಇದ್ದರು.
ದಾವಣಗೆರೆ: ಒಂಟಿ ಮಹಿಳೆ ಮೇಲೆ ಹಲ್ಲೆ ಮಾಡಿ ಸುಲಿಗೆ; ಆರೋಪಿ ಬಂಧನ- 2.17 ಲಕ್ಷ ನಗದು, ಮೊಬೈಲ್ ವಶ
ದಾವಣಗೆರೆ: ನೂತನ ಎರಡು ಸ್ವೀಪಿಂಗ್ ಮಷಿನ್ ಖರೀದಿಸಿದ ಮಹಾನಗರ ಪಾಲಿಕೆ; ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಚಾಲನೆ
ದಾವಣಗೆರೆ: ನಾಳೆ ಕಡ್ಲೆಬಾಳು ಗ್ರಾಮದಲ್ಲಿ ಜನತಾ ದರ್ಶನ ಕಾರ್ಯಕ್ರಮ; ಸಾರ್ವಜನಿಕರ ದೂರು ಸ್ವೀಕರಿಸಲಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ