ದಾವಣಗೆರೆ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ 30 ಸಾವಿರ ಬೆಲೆಯ 504 ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಒಂದು ಬೈಕ್ ಹಾಗೂ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಸಂತೆಬೆನ್ನೂರು ಗ್ರಾಮದಲ್ಲಿನ ಐಓಸಿ ಪೆಟ್ರೋಲ್ ಬಂಕ್ ಮುಂಭಾಗದ ಸಂತೆಬೆನ್ನೂರು – ಬಾಡ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 1)ಜಾಕೀರ್, 53 ವರ್ಷ, ಪಂಕ್ಚರ್ ಅಂಗಡಿಯಲ್ಲಿ ಕೆಲಸ, ವಾಸ: ಸಂತೆಬೆನ್ನೂರು ಗ್ರಾಮ, ಚನ್ನಗಿರಿ ತಾಲೂಕು. 2) ಮನೋಜ್ ಜಿ, 20 ವರ್ಷ, ಗಾರೆ ಕೆಲಸ, ವಾಸ: ಸಂತೆಬೆನ್ನೂರು ಗ್ರಾಮ, ಚನ್ನಗಿರಿ
ತಾಲೂಕು ಇವರುಗಳ ಮೇಲೆ ಚನ್ನಗಿರಿ ವಿಭಾಗದ ಡಿವೈಎಸ್ಪಿ, ವೃತ್ತ ನಿರೀಕ್ಷಕರಮಾರ್ಗದರ್ಶನದಲ್ಲಿ ಸಂತೆಬೆನ್ನೂರು ಪೊಲೀಸ್ ಠಾಣಾ ಪಿಎಸ್‌ಐ ರೂಪ ತೆಂಬದ್ ಮತ್ತು ಸಿಬ್ಬಂದಿಯವರು ದಾಳಿ ಮಾಡಿ, 30.000/- ಸಾವಿರ ರೂ ಬೆಲೆ ಬಾಳುವ 504 ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಕೆಎ-17/ಆರ್-3146 ನಂಬರಿನ ಬೈಕನ್ನು ವಶಕ್ಕೆ ಪಡೆದಿದ್ದಾರೆ. ಗಾಂಜಾವನ್ನು ಪಂಚರ ಸಮಕ್ಷಮ ಪಂಚನಾಮೆಯೊಂದಿಗೆ ಅಮಾನತ್ತುಪಡಿಸಿಕೊಂಡು ಆರೋಪಿತರನ್ನು ಬಂಧನ ಮಾಡಲಾಗಿದೆ.
ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕು; ಸೆ.20ರವರೆಗೆ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ದಾವಣಗೆರೆ: ಇಂದಿನ ಹೊಸ, ಹಳೆಯ ರಾಶಿ, ಬೆಟ್ಟೆ ಅಡಿಕೆ ಬೆಲೆ ಎಷ್ಟಿದೆ..? ಇಲ್ಲಿದೆ ಮಾಹಿತಿ..
ದಾವಣಗೆರೆ: ಅಡಿಕೆ ಕಳ್ಳನ ಪ್ರಕರಣ; 5 ಕ್ವಿಂಟಾಲ್ ಅಡಿಕೆ, ವಾಹನ ಸೇರಿ 4 ಲಕ್ಷ ಮೌಲ್ಯದ ಸ್ವತ್ತು ವಶ-ಓರ್ವ ಬಂಧನ



