ದಾವಣಗೆರೆ: ರಸ್ತೆಯಲ್ಲಿl ಹೋಗುತ್ತಿದ್ದವ ಮೇಲೆ ಏಕಾಏಕಿ ಚಿರತೆ ದಾಳಿ ಮಾಡಿದ್ದು, ಇಬ್ಬರಿಗೆ ಗಾಯವಾದ ಘಟನೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನಲ್ಲಿ ನಡೆದಿದೆ. ಇದರಿಂದ ತಾಲ್ಲೂಕಿನ ಜನ ಆತಂಕಗೊಂಡಿದ್ದು, ರಾತ್ರಿ ವೇಳೆ ಒಂಟಿಯಾಗಿ ಓಡಾಡಲು ಭಯಭೀತರಾಗಿದ್ದಾರೆ.ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನ್ಯಾಮತಿ ತಾಲೂಕಿನ ಹಳೇಮಳಲಿ ಗ್ರಾಮದ ಮಂಜುನಾಥ್, ಹೊಸಮಳಲಿ ಗ್ರಾಮದ ಮಲ್ಲಿಕಾರ್ಜುನ್ ಚಿರತೆ ದಾಳಿ ಮಾಡಿದೆ. ಈ ಇಬ್ಬರು ನ್ಯಾಮತಿಯಿಂದ ತಮ್ಮ ಗ್ರಾಮಗಳಿಗೆ ರಸ್ತೆ ಮೇಲೆ ಹೋಗುತ್ತಿದ್ದಾಗ ಏಕಾಏಕಿ ಚಿರತೆ ದಾಳಿ ಮಾಡಿದೆ. ಈ ದಾಳಿಯಿಂದ ಇಬ್ಬರ ಕೈ-ಕಾಲಿಗೆ ಪೆಟ್ಟಾಗಿದೆ. ಗಾಯಾಳುಗಳನ್ನು ನ್ಯಾಮತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಚಿರತೆಯ ದಾಳಿಯಿಂದ ನ್ಯಾಮತಿ ತಾಲೂಕಿನ ಜನರು ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿರತೆ ದಾಳಿಯ ಸುದ್ದಿ ತಿಳಿದ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಆಸ್ಪತ್ರೆಗೆ ಭೇಟಿ ನೀಡಿ ದಾಳಿಗೆ ಒಳಗಾದವರ ಆರೋಗ್ಯ ವಿಚಾರಿಸಿದ್ದಾರೆ. ಘಟನೆಯಿಂದ ಭಯಭೀತರಾಗಿರುವ ಗ್ರಾಮದ ಜನರು ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ದಾವಣಗೆರೆ: ಅಡಿಕೆ ಕಳ್ಳನ ಪ್ರಕರಣ; 5 ಕ್ವಿಂಟಾಲ್ ಅಡಿಕೆ, ವಾಹನ ಸೇರಿ 4 ಲಕ್ಷ ಮೌಲ್ಯದ ಸ್ವತ್ತು ವಶ-ಓರ್ವ ಬಂಧನ
ದಾವಣಗೆರೆ: ಇಂದಿನ ಹೊಸ, ಹಳೆಯ ರಾಶಿ, ಬೆಟ್ಟೆ ಅಡಿಕೆ ಬೆಲೆ ಎಷ್ಟಿದೆ..? ಇಲ್ಲಿದೆ ಮಾಹಿತಿ..



